ಮಹಿಳೆ ಮೇಲೆ ಸಿದ್ದರಾಮಯ್ಯ ಗರಂ…

209
firstsuddi

ಮೈಸೂರು :ಇಂದು ಟಿ.ನರಸೀಪುರದ ಗರ್ಗೇಶ್ವರ ಗ್ರಾಮಕ್ಕೆ ಸಿದ್ದರಾಮಯ್ಯ  ಅವರು ಭೇಟಿ ನೀಡಿದ್ದರು. ಆ ವೇಳೆ  ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವರುಣ ಕ್ಷೇತ್ರದ ಶಾಸಕ ಶಾಸಕರಾಗಿರುವ ನಿಮ್ಮ ಮಗನೂ ಕೈಗೆ ಸಿಗಲ್ಲ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್  ಎಂಬ ಮಹಿಳೆ ದೂರು ನೀಡುತ್ತಿದ್ದ ಸಂದರ್ಭದಲ್ಲಿ ಟೇಬಲ್​ ಕುಟ್ಟಿ ಏರುಧ್ವನಿಯಲ್ಲಿ ಮಾತನಾಡಿದರು. ಆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಏಕಾಏಕಿ ಗರಂ ಆದ ಘಟನೆ ನಡೆದಿದ್ದು, ಏನಮ್ಮ ಟೇಬಲ್ ಕುಟ್ಟಿ ಮುತಾಡ್ತಿಯಾ? ಮಹಿಳೆಯ ಬಳಿ ಇದ್ದ ಮೈಕ್ ಕಿತ್ತುಕೊಂಡು ಕೂತ್ಕೋಳಮ್ಮ ಸಾಕು.ನನ್ನ ಮುಂದೇನೆ ಟೇಬಲ್ ಕುಟ್ಟುತ್ತೀಯಾ. ಅನ್ಯಾಯ ಮಾಡಿರೋ ತರ ಮಾತಾಡ್ತೀಯಲ್ಲಾ ಎಂದು ಸಿದ್ದರಾಮಯ್ಯ ಮಹಿಳೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.