ಉತ್ತರಕೊಡಿ ಬಿಎಸ್‌ವೈ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್…

367
firstsuddi

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಎಸ್ ಯಡಿಯೂರಪ್ಪರವರ  ವಿರುದ್ದ ಸರಣಿ ಟ್ವಿಟ್ ಮಾಡಿದ್ದು,ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾಮಾಡಿ, ಮಹದಾಯಿ ವಿವಾದ ಬಗೆಹರಿಸಿ, ತಾರತಮ್ಯಮಾಡದೆ ನಮಗೆ ಬರಪರಿಹಾರ ನೀಡಿ ಎಂದೆಲ್ಲಾ ಪ್ರಧಾನಿ ಮೋದಿ ಅವರನ್ನು ಕೇಳಿಕೊಂಡೆವು. ಯಾವುದನ್ನೂ ಮಾಡಲಿಲ್ಲ. ಆಗ ಲೋಕಸಭಾ ಸದಸ್ಯರಾಗಿದ್ದ ಬಿಎಸ್ವೈನೀವೇನು ಮಾಡಿದ್ದೀರಿ? ರೈತರ ಬೆಳೆಯ ಉತ್ಪಾದನಾ ವೆಚ್ಚದ ಮೇಲೆ ಶೇಕಡಾ 50ರಷ್ಟು ಲಾಭ ಬರುವಂತಹ ಬೆಂಬಲ ಬೆಲೆ ನೀಡುವುದಾಗಿ ಬಿಜೆಪಿ ಲೋಕಸಭಾಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿತ್ತಲ್ಲಾ? ಯಾವ ರೈತರಿಗೆ ಬೆಲೆ ಸಿಕ್ಕಿದೆರೈತನಾಯಕಯಡಿಯೂರಪ್ಪನವರೇ? ಕೇಂದ್ರ ಸರ್ಕಾರದ ಎಸ್ಡಿಆರ್ಎಫ್ಕರ್ನಾಟಕದಲ್ಲಿ ಬರಪರಿಹಾರಕ್ಕಾಗಿ 5 ವರ್ಷಗಳ ಅವಧಿಗೆ ನಿಗದಿಪಡಿಸಿದ್ದು ಕೇವಲ ರೂ. 1527 ಕೋಟಿ, ಮಹಾರಾಷ್ಟ್ರಕ್ಕೆ ರೂ. 8195 ಕೋಟಿ,ರಾಜಸ್ತಾನಕ್ಕೆ ರೂ.6094ಕೋಟಿ, ಮಧ್ಯಪ್ರದೇಶಕ್ಕೆ ರೂ. 4847 ಕೋಟಿ, ಗುಜರಾತ್ಗೆ ರೂ. 3394 ಕೋಟಿ. ಯಾಕೆ ತಾರತಮ್ಯ ಬಿಎಸ್ವೈ? ಉತ್ತರಕೊಡಿ ಬಿಎಸ್ವೈಎಂದು ಸಿದ್ದರಾಮಯ್ಯ ಅವರು ಸರಣಿ ಟ್ವಿಟ್ ಮಾಡಿದ್ದಾರೆ.