ಜಯನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್‍ನ ಅಭ್ಯರ್ಥಿ ಸೌಮ್ಯರೆಡ್ಡಿ 14ನೇ ಸುತ್ತಿನಲ್ಲೂ ಮುನ್ನಡೆ.

279
firstsuddi

ಬೆಂಗಳೂರು- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 14ನೇ ಸುತ್ತಿನ ಬಳಿಕವು ಕಾಂಗ್ರೇಸ್ ಮುನ್ನಡೆ. ಕಾಂಗ್ರೇಸ್ ಅಭ್ಯರ್ಥಿ 51192ಮತಗಳು, ಬಿ.ಜೆ.ಪಿ ಪ್ರಹ್ಲಾದ್ ಬಾಬುಗೆ 44292 ಮತಗಳು, ಪಕ್ಷೇತರ ಅಭ್ಯರ್ಥಿ ರವಿಕೃಷ್ಣರೆಡ್ಡಿ 1451 ಮತಗಳು ಗಳಿಸಿದ್ದು. ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯರೆಡ್ಡಿ 14ನೇ ಸುತ್ತು ಪೂರ್ಣಗೊಂಡಾಗ 6900 ಮತಗಳ ಮುನ್ನಡೆ ಗಳಿಸಿದ್ದಾರೆ. ಇನ್ನೂ ಎರಡು ಸುತ್ತುಗಳ ಮತ ಎಣಿಕೆ ಬಾಕಿ ಉಳಿದಿದೆ.