ಚಿಕ್ಕಮಗಳೂರು : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಶೃಂಗೇರಿ ಕ್ಷೇತ್ರದಲ್ಲಿ ಹಿಂದಿನಿಂಲೂ ಆಚರಣೆಗಳನ್ನು ಮಾಡುತ್ತಾ ಬಂದಿದ್ದೇವೆ.ಆ ಆಚರಣೆಯನ್ನ ನಾವು ಮುಂದುವರೆಸಿದ್ದೇವೆ.ಇದರಲ್ಲಿ ವಿಶೇಷತೆ ಏನು ಇಲ್ಲ. ಎಲ್ಲಾ ಸಮಾಜಕ್ಕೂ, ಜನತೆಗೂ ಒಳ್ಳೆಯದಾಗಬೇಕು ಅಂತಾ ಪೂಜೆ ಮಾಡಿದ್ದೇನೆ ಎಂದಿದ್ದಾರೆ.
ಸಿದ್ದಗಂಗಾ ಶ್ರೀ ಗಳ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಶ್ರೀಗಳು ಚೆನೈ ಗೆ ಹೆಚ್ಚಿನ ಚಿಕಿತ್ಸೆ ಗೆ ಕರೆದುಕೊಂಡು ಹೋಗುತ್ತಿದ್ದಾರೆ.ಅವರ ಆರೋಗ್ಯದಲ್ಲಿ ಚೇತರಿಕೆಯಾಗಬೇಕಿದೆ. ಶ್ರೀ ಗಳು ಗುಣಮುಖರಾಗಲಿ ಅಂತಾ ಶಾರದೆ ಬಳಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ.
ಆಪರೇಷನ್ ಕಮಲದ ಬಗ್ಗೆ ಸುದ್ದಿಗಾರರು ಕೇಳಿದ ಪ್ರೆಶ್ನೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು ಈ ಬಗ್ಗೆ ನನ್ನ ಬಳಿ ಕೇಳಬೇಡಿ. ಯಾರ್ಯಾರು ಏನು ಮಾಡುತ್ತಿದ್ದಾರೆ ಅಂತಾ ನನಗೆ ಗೊತ್ತಿದೆ. ನಾನೇಕೆ ತಲೆಕೆಡಿಸಕೊಳ್ಳಬೇಕು.ಈ ಬಗ್ಗೆ ತಾಯಿ ಶಾರದೆ ನೋಡಿಕೊಳ್ಳುತ್ತಾಳೆ. ಮನುಷ್ಯರಿಗಿಂತ ದೇವರುಕೊಟ್ಟ ಆರ್ಶೀವಾದ ದೊಡ್ಡದು. ತಾಯಿಯ ಆರ್ಶೀವಾದದಿಂದ ನಾನು ಸಿಎಂ ಆಗಿದ್ದೇನೆ ನಾನು ಎಷ್ಟು ದಿನ ಸಿಎಂ ಆಗಿರಬೇಕು ಅಂತಾ ಶೃಂಗೇರಿ ಶಾರದಾಂಬೆ ನಿರ್ಧಾರ ಮಾಡುತ್ತಾಳೆ ಎಂದಿದ್ದಾರೆ.










