ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಡಗೊಳ್ಳಲು ಕ್ರೀಡೆ ಅತ್ಯಂತ ಅವಶ್ಯಕವಾಗಿದೆ.- ಭೀಮೇಶ್ವರ ಜೋಷಿ…

600
firstsuddi

ಕಳಸ:ಸ್ನೇಹಮಯ ಜೀವನವನ್ನಾಗಿಸಲು,ಸಮುದಾಯದಲ್ಲಿ ಸಾಮರಸ್ಯ ಉಂಟಾಗಲು ಕ್ರೀಡಾಕೂಟಗಳು ಅತ್ಯಂತ ಸಹಕಾರಿಯಾಗುತ್ತದೆ ಎಂದು ಹೊರನಾಡು ದೇವಸ್ಥಾನದ ಧರ್ಮಕರ್ತ ಡಾllಜಿ.ಭೀಮೇಶ್ವರ ಜೋಷಿ ಹೇಳಿದರು.
ರೋಟರಿ ಸಮುದಾಯದ ದಳ ಹೊರನಾಡು ಇವರ ವತಿಯಿಂದ ಭಾನುವಾರ ಹೊರನಾಡಿನಲ್ಲಿ ನಡೆದ ಕೆಸರು ಗದ್ದೆ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಡಗೊಳ್ಳಲು ಕ್ರೀಡೆ ಅತ್ಯಂತ ಅವಶ್ಯಕವಾಗಿದೆ.ಆಟದಲ್ಲಿ ಸ್ಪರ್ದಿಯು ಗೆಲ್ಲಲೇ ಬೇಕೆಂಬ ಗುರಿಯನ್ನು ಇಟ್ಟುಕೊಳ್ಳುತ್ತಾನೆ ಮತ್ತು ಸ್ಪೂರ್ತಿಯು ಇರುತ್ತದೆ.ಅದೇ ಗುರಿ ಮತ್ತು ಸ್ಪೂರ್ತಿ ಆತನ ಜೀವನದ ಯಶಸ್ಸಿಗೆ ಕಾರಣವಾಗುತ್ತದೆ.ಕ್ರೀಡೆಯಲ್ಲಿ ಸೋಲು ಗೆಲುವು ಅನಿವಾರ್ಯ ಆದರೆ ಬಾಗವಹಿಸುವುದು ಮುಖ್ಯ ಎಂದು ಹೇಳಿದರು.ಕಾರ್ಯಕ್ರಮವನ್ನು ಜೋಷಿ ದಂಪತಿಗಳು ಕೆಸರು ಗದ್ದೆಯಲ್ಲಿ ಹಗ್ಗಜಗ್ಗಾಟದ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಲಾ ಮಕ್ಕಳಿಂದ ಹಿಡಿದು 60 ವರ್ಷ ವಯಸ್ಸಿನವರೆಗಿನ ಪುರುಷರು ಮತ್ತು ಮಹಿಳೆಯರಿಗೆ,ಹಗ್ಗ ಜಗ್ಗಾಟ,ಸಂಗೀತ ಕುರ್ಚಿ,ಮೊಸರು ಕುಡಿಕೆ,ಓಟ,ನಿಂಬೆ ಹಣ್ಣು ಓಟ,ಮ್ಯೂಸಿಕ್ ಡ್ಯಾನ್ಸ್, ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು.ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ನೂರಾರು ಕ್ರೀಡಾಳುಗಳು ಭಾಗವಹಿಸಿ ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಸಂಬ್ರಮ ಪಟ್ಟರು.
ಈ ಸಂದರ್ಭದಲ್ಲಿ ರೋಟರಿ ಸಮುದಾಯ ದಳದ ಅಧ್ಯಕ್ಷ ದಿವಾಕರ ಭಟ್,ರೋಟರಿ ಅಧ್ಯಕ್ಷ ಕಿರಣ್ ಶೆಟ್ಟಿ,ಇನ್ನರ್‍ವೀಲ್ ಅಧ್ಯಕ್ಷೆ ಮಾಲಾ,ರಾಜಲಕ್ಷ್ಮೀ ಜೋಷಿ,ಬಾಲಕೃಷ್ಣ ಭಟ್,ಸನ್ಮತಿ ವೃಷಭರಾಜ್,ರಾಘವೇಂದ್ರ,ಅಜಿತ್,ಶ್ರೇಣಿಕ ಇತರರು ಇದ್ದರು.