ಕಳಸ:ಇಲ್ಲಿಯ ದೇವರಗುಡ್ಡ ಗ್ರಾಮಸ್ಥರು ತಮ್ಮ ಊರಿಗೆ ಹೋಗುವ ಶಿಥಿಲಗೊಂಡಿದ್ದ ರಸ್ತೆಯನ್ನು ದುರಸ್ಥಿಗೊಳಿಸಿದರು.ಕಳಸ ಮುಖ್ಯ ರಸ್ತೆಯಿಂದ ದೇವರಗುಡ್ಡ ಹೋಗುವ ರಸ್ತೆ ಅತ್ಯಂತ ಶಿಥಿಲಗೊಂಡು ಸಾರ್ವಜನಿಕರ ಪ್ರಯಾಣಕ್ಕೆ ಅಯೋಗ್ಯವಾಗಿತ್ತು.ಯಾವುದೇ ವಾಹನ ಕೂಡ ಹೋಗದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದರಿಂದ ಗ್ರಾಮಸ್ಥರು ಸುಮಾರು ಎರಡು ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಸಾಗಿ ತಮ್ಮ ಮನೆ ಸೇರುತ್ತಿದ್ದರು.ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಂತು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದರು.ಇತ್ತೀಚೆಗೆ ಸುರಿದ ಮಳೆ ಈ ರಸ್ತೆಯನ್ನು ಸಂಪೂರ್ಣವಾಗಿ ಹಾಳಾಗಿದ್ದು, ಈ ರಸ್ತೆಯನ್ನು ಯಾರೂ ದುರಸ್ಥಿ ಮಾಡಲು ಮುಂದೆ ಬಂದಿರಲಿಲ್ಲ ಇದರಿಂದ ಬೇಸೆತ್ತ ಗ್ರಾಮಸ್ಥರು ಭಾನುವಾರ ತಾವೇ ಹಾರೆ ಪಿಕ್ಕಾಸಿ ಹಿಡಿದುಕೊಂಡು ಉಂಟಾದ ದೊಡ್ಡ ದೊಡ್ಡ ಹೊಂಡ ಗುಂಡಿಗಳನ್ನು ಮುಚ್ಚಿ ತಮ್ಮ ಗ್ರಾಮಕ್ಕೆ ಬರುವ ರಸ್ತೆಯನ್ನು ದುರಸ್ಥಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದಆನಂದ, ಸೀನ, ವಿನ್ಸಿ, ಸುಂದರ, ಅಭಿಷೇಕ್, ರಮೇಶ,ಅರುಣಾ,ರಾಜು,ಅಂತೋನಿ ಇತರರು ಇದ್ದರು.