ದೈಹಿಕವಾಗಿ ಮಾನಸಿಕವಾಗಿ ಮಕ್ಕಳನ್ನು ಸದೃಡಗೊಳಿಸುವ ಕ್ರೀಡೆ, ಕಲೆಗಳು ಮಕ್ಕಳ ಕಲಿಕೆಗೆ ಸಹಕಾರಿ: ಪರಮೇಶ್ವರ ರಾಜೇ ಅರಸ್…

268
firstsuddi

ಚಿಕ್ಕಮಗಳೂರು : ಶಿಕ್ಷಕರು ಕೇವಲ ಶಾಲೆಯಲ್ಲಿನ ಕಲಿಕೆಗೆ ಮಾತ್ರ ಸೀಮಿತ ಅಲ್ಲಿನ ಓದು, ಕಲಿಕೆ ಚಟುವಟಿಕೆಗೆ ಸೀಮಿತವಾಗಿರುತ್ತಾರೆ. ಆದರೆ ಕೆಲ ಶಿಕ್ಷಕರು ಅದರ ಜೊತೆಗೆ ಮತಷ್ಟು ಚಟುವಟಿಕೆಗಳನ್ನು ಹೊಸ ಹೊಸ ವಿಚಾರಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲಿಸಿ ತರಬೇತಿ ನೀಡುವ ಕೆಲಸವನ್ನು ಮಾಡುತ್ತಾರೆ. ಹಾಗೆ ತಮ್ಮ ಶಾಲೆಯ ಚಟುವಟಿಕೆಯ ಜೊತೆಗೆ ಹಲವು ವಿದ್ಯಾರ್ಥಿಗಳ  ತಂಡವನ್ನು ರಚಿಸಿ ಅವರಿಗೆ ಎಲೆ ಮರಿ ಕಾಯಿಯಂತಿರುವ ಹ್ಯಾಂಡ್ ಬಾಲ್ ಕ್ರೀಡೆಯ ತರಬೇತಿ, ಓಟ, ಬಾಸ್ಕೆಟ್ ಬಾಲ್ ತರಬೇತಿ  ವಿದ್ಯಾರ್ಥಿಗಳಿಗೆ ಉತ್ತಮ ಬರವಣಿಗೆಯ ಬಗ್ಗೆ ತರಬೇತಿ . ಸ್ವಚ್ಚತೆ ಕುರಿತಾಗಿ ಪರಿಸರದ ಬಗ್ಗೆ ಜಾಗೃತಿ ಇಂತಹ ಹತ್ತು ಹಲವು  ಸಾಮಾಜಿಕ ಕಾರ್ಯಕ್ರಮಗಳನ್ನು ಚಿಕ್ಕಮಗಳೂರಿನ ಹ್ಯಾಂಡ್ ಬಾಲ್ ಸಂಸ್ಥೆಯ ಕಾರ್ಯದರ್ಶಿ, ಹಾಗೂ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪರಮೇಶ್ವರ ರಾಜೇ ಅರಸ್ ಇವರು ಮಾಡುತ್ತಿದ್ದಾರೆ. ಯಾವುದೇ ಸ್ವಾರ್ಥವಿಲ್ಲದೆ ಶಾಲಾ ವಿದ್ಯಾರ್ಥಿಗಳೀಗೆ ಕ್ರೀಡೆಗಳ ಬಗ್ಗೆ ಉಚಿತ ತರಬೇತಿ ಹಾಗೂ ಉಚಿತ ಬೇಸಿಗೆ ಶಿಬಿರಗಳನ್ನು ಇವರು ನಡೆಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆನಡೆದ ಹ್ಯಾಂಡ್ ಬಾಲ್ ತರಬೇತಿ ಸಂದರ್ಭದಲ್ಲಿ ಅವರು ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ.ಶಾಲಾ ಮಕ್ಕಳಿಗೆ ವಿವಿಧ ಓದಿನ ಜೊತೆ ವಿವಿಧ ಚಟುವಟಿಕೆಗೆಳನ್ನು ಕ್ರೀಡೆಗಳನ್ನು ಕಲಿಸಿಕೊಡಲಾಗುತ್ತದೆ. ದೈಹಿಕವಾಗಿ ಮಾನಸಿಕವಾಗಿ ಮಕ್ಕಳನ್ನು ಸದೃಡಗೊಳಿಸುವ ಕ್ರೀಡೆ ಕಲೆಗಳು ಮಕ್ಕಳ ಕಲಿಕೆಗೆ ಸಹಕಾರಿಯಾಗಿದ್ದು ಅಂತಹ ಕ್ರೀಡೆಗಳು ಅವಶ್ಯವಾಗಿವೆ.

ತಾವು ಪ್ರಸ್ತುತ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು ಚಿಕ್ಕಮಗಳೂರು ಹ್ಯಾಂಡ್ ಬಾಲ್ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹ್ಯಾಂಡ್ ಬಾಲ್ ಕೂಡ ಅತ್ಯುತ್ತಮ ಕ್ರೀಡೆಗಳಲ್ಲಿ ಒಂದಾಗಿದ್ದು ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಮತ್ತು ಲವ ಲವಿಕೆಯನ್ನು ತರುತ್ತದೆ. ಇದಕ್ಕಾಗಿ ನಾವು ಸಂಸ್ಥೆಯನ್ನು ಹುಟ್ಟುಹಾಕಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಪ್ರತಿ ವರ್ಷ ಉಚಿತವಾಗಿ ಶಾಲಾ ಮಕ್ಕಳೀಗೆ ಹ್ಯಾಂಡ್ ಬಾಲ್ ತರಬೇತಿಯನ್ನು ನೀಡುತ್ತಿದ್ದೇನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ತರಬೇತಿ ನೀಡುವ ಶಿಕ್ಷಕರು ಕೇವಲ ಇಬ್ಬರಿದ್ದೇವೆ. ಈ ಕ್ರೀಡೆಯಲ್ಲಿ ಮಕ್ಕಳು ಪಾಲ್ಗೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿನುಗಬೇಕು ಎಂಬುದು ನಮ್ಮ ಕನಸಾಗಿದೆ ಎಂದಿದ್ದಾರೆ. ಪರಮೇಶ್ವರ ರಾಜೇ ಇವರು ತರಬೇತಿ ನೀಡಿದ್ದ ಇವರ ಹ್ಯಾಂಡ್ ಬಾಲ್ ತಂಡವು ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಹ್ಯಾಂಡ್‍ಬಾಲ್ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ. ಅಲ್ಲದೆ ಈ ಬಾರಿ ದಸರಾ ಕ್ರೀಡಕೂಟದಲ್ಲಿಯು ಇವರ ತಂಡ ಭಾಗವಹಿಸಿ ನಾಲ್ಕನೆ ಸ್ಥಾನವನ್ನು ಪಡೆದಿದೆ.  ಅಲ್ಲದೆ ಹಲವು ವಲಯ ಮಟ್ಟ, ಜಿಲ್ಲಾ ಮಟ್ಟಗಳಲ್ಲಿ ಇವರ ತಂಡಗಳು ಬಹುಮಾನಗಳನ್ನು ತಂದಿವೆ ಎಂದು ಅವರು ಹೇಳಿದ್ದಾರೆ.