ನಮಗೇನು ವೈಯಕ್ತಿಕ ಬದುಕು ಇಲ್ವಾ..?- ಸಿದ್ದರಾಮಯ್ಯ…

305
firstsuddi

ಮೈಸೂರು: ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಮುಂದಿನ ಲೋಕಸಭಾ ಚುನಾವಣೆಯೊಳಗೆ ಮುಖ್ಯಮಂತ್ರಿ ಆಗದಿದ್ದರೆ ಮತ್ತೆ ಯಾವತ್ತು  ಮುಖ್ಯಮಂತ್ರಿ ಆಗಲ್ಲ ಈ ಹಿನ್ನಲೆಯಲ್ಲಿ ಬಿಜೆಪಿಯವರು ಬೇರೆ ಶಾಸಕನ್ನು ಖರೀದಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರ ಬೀಳುತ್ತೆ ಅಂತ ಬಿಜೆಪಿಯವರು  ಹೇಳುತ್ತಲೇ ಇದ್ದಾರೆ ಆದರೆ  ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಮೈತ್ರಿ ಸರ್ಕಾರದ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ.ಸಿದ್ದರಾಮಯ್ಯ ಅವರು ವಿದೇಶಕ್ಕೆ  ತೆರಳುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಅವರು  ಎಲ್ಲವನ್ನೂ ನಿಮಗೆ ಹೇಳಿ ಹೋಗ್ಬೇಕಾ? ನಮಗೇನು ವೈಯಕ್ತಿಕ ಬದುಕು ಇಲ್ವಾ?  ಸ್ನೇಹಿತರ ಮನೆಯಲ್ಲಿ ಮದುವೆ ಇದೆ ಹಾಗಾಗಿ ಹೋಗುತ್ತಿದ್ದೇನೆ ಎಂದಿದ್ದಾರೆ.