ಚಿಕ್ಕಮಗಳೂರು: ನಿಸ್ವಾರ್ಥ ಸಾಮಾಜಿಕ ಕಾಳಜಿ ಇರುವ ವ್ಯಕ್ತಿಯನ್ನು ಸಮಾಜ ಹೇಗೆ ಸ್ಮರಿಸುತ್ತದೆ ಎನ್ನುವುದಕ್ಕೆ ನೂರಾಹನ್ನೊಂದು ವರ್ಷಗಳ ತುಂಬ ಜೀವನ ನಡೆಸಿ ಶಿವೈಕ್ಯರಾಗಿರುವ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳು ಜೀವಂತ ನಿದರ್ಶನವಾಗಿದ್ದಾರೆ ಎಂದು ಸ್ವಸ್ಥಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಅನಿಲ್ ಆನಂದ್ ಅಭಿಪ್ರಾಯಪಟ್ಟರು.
ಸ್ವಸ್ಥ ಭೂಮಿ ಪ್ರತಿಷ್ಠಾನ, ಜೆಸಿಐ ಚಿಕ್ಕಮಗಳೂರು ಮಲ್ನಾಡ್, ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ ಹಾಗೂ ಸಾರ್ವಜನಿಕರ ಸಂಯುಕ್ತ ಆಶ್ರಯದಲ್ಲಿ ಆಜಾದ್ ಪಾರ್ಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ನುಡಿ ನಮನ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮದಲ್ಲಿ ನುಡಿ ನಮನ ಅರ್ಪಿಸಿ ಅವರು ಮಾತನಾಡಿದರು.
ನಿಸ್ವಾರ್ಥ ಸಾಧನೆಯಿಂದ ವಿಶ್ವದಲ್ಲೇ ಅತ್ಯಂತ ಉನ್ನತ ಏರಿದ ಮತ್ತು ಉತ್ತಮವಾದ ಸಂಸ್ಥೆಯನ್ನು ನಿರ್ಮಿಸಿ ಲಕ್ಷಾಂತರ ವಿದ್ಯಾರ್ಥಿಗಳ ಜಿವನಕ್ಕೆ ದಾರಿದೀಪವಾಗಿ ಸರ್ವರಿಗೂ ಆದರ್ಶಪ್ರಾಯರಾಗಿದ್ದಾರೆ. ಇವರ ದೈವಿಗುಣಗಳನ್ನು ನಾವು ಅಳವಡಿಸಿಕೊಂಡು ವಿಶ್ವ ಮಾನವರಾಗೋಣ ಎಂದು ಕರೆ ನೀಡಿದರು.
ಸ್ವಸ್ಥಭೂಮಿ ಪ್ರತಿಷ್ಠಾನದ ಸ್ವರ್ಣಗೌರಿ ಮಾತನಾಡಿ ತ್ರಿವಿಧ ದಾಸೋಹ ಮೂಲಕ ಆಧುನಿಕ ಕಾಲದ ದಾರ್ಶನಿಕರಾದ ಸಿದ್ಧಗಂಗಾ ಶ್ರೀಗಳ ತತ್ವಗಳನ್ನು ಪಾಲಿಸುವ ಸಂಕಲ್ಪ ಮಾಡಿಕೊಳ್ಳಬೇಕು. ಸಂಕಲ್ಪದ ಜೊತೆಗೆ ಅವರ ಗುಣಗಳನ್ನು ಅಹ್ವಾನಿಸಿಕೊಂಡು ಅದನ್ನು ನಮ್ಮ ನಡೆನುಡಿಯಲ್ಲಿ ಅಳವಡಿಸಿಕೊಂಡು, ನಮ್ಮ ಮಕ್ಕಳಿಗೂ ಕಲ್ಪಿಸುವಂತಾಗಬೇಕೆಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕರಾದ ಆನಂದ್ ಮೂರ್ತಿಯವರು ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕರಾದ ಬಾರತದಲ್ಲಿ ಸಮಾನತೆಯ ತತ್ವ ಸಾರುತ್ತಾ ಬಸವಣ್ಣನವರಂತೆ ಆದರ್ಶ ಪ್ರಾಯರಾಗಿ ಜಾತಿ ಧರ್ಮದ ಎಲ್ಲೆಯನ್ನು ಮೀರಿ ಎಲ್ಲರಿಗೂ ಸಮಾನವಾದ ಶಿಕ್ಷಣ ಊಟ ವಸತಿ ಕಲ್ಪಿಸಿ, ಈ ಶತಮಾನದಲ್ಲಿ ಯಾರೂ ಮಾಡದ ಅಭೂತಪೂರ್ವ ಸಾಧನೆ ಮಾಡಿ, ಸಮಾಜದ ಸ್ವಾಸ್ತ ಏಳಿಗೆಗೆ ದುಡಿದ ಮಹಾಸ್ವಾಮಿಯವರ ಕಾರ್ಯ ಎಂದೆಂದು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ನೆಲೆಸಿದೆ ಎಂದು ಹೇಳಿದರು.
ಇದೇ ವೇಳೆ ಜೇಸಿಐ ಚಿಕ್ಕಮಗಳೂರು ಮಲ್ನಾಡ್ ಘಟಕದ ಅಧ್ಯಕ್ಷರಾದ ರಘುನಂದನ್, ಸವಿತಾ ಸಮುದಾಯದ ಮೀಸಲಾತಿ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ್, ಮಾಜಿ ಅಧ್ಯಕ್ಷರಾದ ಇಕ್ಬಾಲ್, ಚಂದ್ರಪ್ಪ, ಶಿವಕುಮಾರ್‍ರವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಬಗ್ಗೆ ಮಾತನಾಡಿದರು.
ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಯದರ್ಶಿ ಪ್ರದೀಪ್ ಕುಮಾರ್, ವಾಸುದೇವ್, ಗಿರಿಧರ್‍ರಾಜ್‍ಅರಸ್, ವಿಜಯ್‍ಕುಮಾರ್, ವಿಶ್ವಾಸ್, ಸಿ. ಮಾದವ್, ಪುನೀತ್, ಸಂದೀಪ್, ಗಿರೀಶ್, ಪರಮೇಶ್, ಸದೆಯ್, ಸುನಿಲ್, ಶಿವು, ಮೋಹನ್, ದಯಾನಂದ್, ವರ್ನಲ್, ಮನು, ನೂತನ್, ಸಂಪತ್, ಮುಂತಾದವರು ಭಾಗವಹಿಸಿದ್ದರು.
Home ಸ್ಥಳಿಯ ಸುದ್ದಿ ನಿಸ್ವಾರ್ಥ ಸಾಮಾಜಿಕ ಕಾಳಜಿ ಇರುವ ವ್ಯಕ್ತಿಯನ್ನು ಸಮಾಜ ಹೇಗೆ ಸ್ಮರಿಸುತ್ತದೆ ಎನ್ನುವುದಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿಗಳು...










