ಮೂಡಿಗೆರೆ : ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 11ನೆ ಕುವೆಂಪು ನಗರದ ಸುರೇಶ್ ಗೌಡ ರವರ ಮನೆಯ ರಸ್ತೆ ಹಾಗೂ ವಾರ್ಡ್ ನಂಬರ್ 11 ರಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅತಿ ಸಮೀಪ ರಸ್ತೆ ನಿರ್ಮಾಣ ಕಾಮಗಾರಿಯನ್ನು ಬೇರಡೆಗೆ ಮಾಡುತ್ತಿರುವುದನ್ನು ವಿರೋಧಿಸಿ ಅದೇ ಜಾಗದಲ್ಲಿ ಕಾಮಗಾರಿಯನ್ನು ಮಾಡುವಂತೆ ಶ್ರೀರಾಮ ಸೇನೆಯ ವತಿಯಿಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆಯ ತಾಲ್ಲೂಕು ಅಧ್ಯಕ್ಷ ಅಜಯ್ ಗೌಡ ಅವರು 2011ರಲ್ಲಿ ವಾರ್ಡ್ ನಂಬರ್ 11 ರಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅತಿ ಸಮೀಪ ರಸ್ತೆ ನಿರ್ಮಾಣಮಾಡುವಂತೆ ಮನವಿ ಸಲ್ಲಿಸಿದ್ದು ಅಂದಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಪ್ಪಿಗೆಯನ್ನು ನೀಡಿದ್ದರೂ. ಆದರೆ 9 ವರ್ಷಗಳ ನಂತರ ಏಕಾಏಕಿಯಾಗಿ ಆ ರಸ್ತೆಯ ಕಾಮಗಾರಿಯನ್ನು ಬದಿಗಿಟ್ಟು ಅದೇ ವಾರ್ಡ್‍ನ ಪಕ್ಕದ ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
9 ವರ್ಷಗಳಿಂದಲೂ ಕಾಮಗಾರಿಯನ್ನು ಮಾಡುವಂತೆ ಮನವಿ ಸಲ್ಲಿಸಿದರು ಕಾಮಗಾರಿ ಕೈಗೆತ್ತಿಗೊಳ್ಳದೆ ಬೇರೆ ರಸ್ತೆ ಮಾಡುತ್ತಿರುವುದರಿಂದ ಈ ಮೊದಲೇ ಮನವಿ ನೀಡಿದ ರಸ್ತೆ ಕಾಮಗಾರಿಯನ್ನು ಕಡೆಗಣಿಸಿ ಬೇರೆ ರಸ್ತೆ ಕಾಮಗಾರಿಯನ್ನು ಆರಂಭಿಸಿರುವುದರಿಂದ ಅದನ್ನು ವಿರೋಧಿಸಿ ಶ್ರೀರಾಮ ಸೇನೆ ಸದಸ್ಯರು ಮತ್ತು ಸಾರ್ವಜನಿಕರು ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿ ಯನ್ನು ಶೀಘ್ರವೇ ಪ್ರಾರಂಭಿಸಬೇಕೆಂದು ಒತ್ತಾಯಿಸಿದ್ದು. ಈ ವಿಚಾರವಾಗಿ ಅಧಿಕಾರಿಗಳ ವಿರುದ್ದ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಮನವಿ ಪತ್ರವನ್ನು ಪಟ್ಟಣ ಪಂಚಾಯಿತಿಯ ಅಧಿಕಾರಿ ಶರತ್ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುರೇಶ್ ಗೌಡ, ಸೋಮಣ್ಣ ಸೇರಿದಂತೆ ಶ್ರೀರಾಮಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.










