ರಾಜ್ಯ ಬಜೆಟ್-ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯಲ್ಲಿ ಏರಿಕೆ…

154
firstsuddi

ಬೆಂಗಳೂರು : ರಾಜ್ಯ ಬಜೆಟ್‍ನಲ್ಲಿ ಸರ್ಕಾರ ವಾಹನ ಸವಾರರಿಗೆ ಶಾಕ್ ನೀಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಏರಿಸಲಾಗಿದೆ. ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಕೂಡಾ ಮಾರಾಟ ತೆರಿಗೆಯಲ್ಲಿ ಏರಿಕೆ ಮಾಡಿದ್ದರು. ಅದರಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಾ ಮಾರಾಟ ತೆರಿಕೆಯಲ್ಲಿ ಏರಿಕೆ ಮಾಡಿದ್ದು, ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೆ. 32ರಿಂದ ಶೇ.35 ಕ್ಕೆ ಏರಿಸಿದ್ದರೆ, ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 21ರಿಂದ ಶೇ.24 ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 1.60 ಹಾಗೂ ಡೀಸೆಲ್ ದರ ಪ್ರತಿ ಲೀಟರ್‍ಗೆ 1.59 ರೂ. ಏರಿಕೆಯಾಗಲಿದೆ.