ಮೂಡಿಗೆರೆ : ಪಟ್ಟಣದ ತತ್ಕೊಳ ರಸ್ತೆಯ ಜಯ ಡ್ರೈವಿಂಗ್ ಸ್ಕೂಲ್ ಮುಂಭಾಗದ ಚರಂಡಿ ಹಲವು ದಿನಗಳಿಂದ ಕಸ ಕೊಳೆತು ನಾರುತ್ತಿದ್ದು, ಇದರಿಂದ ಇಲ್ಲಿಯೇ ವಾಸಿಸುವ ಸಾರ್ವಜನಿಕರು ಹಾಗೂ ಅಂಗಡಿ ವ್ಯಾಪಾರಸ್ಥರು ತನ್ನ ಮೂಗಿನ ಮೇಲೆ ಕೈಹಿಟ್ಟುಕೊಂಡೇ ಇರುವ ಪರಿಸ್ಥಿತಿ ನಿರ್ಮಾಣವಾಗಿದ್ದರು ಇದರ ಕುರಿತು ಈ ಹಿಂದಿನ ಇದೇ ವಾರ್ಡಿಗೆ ಸಂಬಂಧಿಸಿದ ಸದಸ್ಯರಲ್ಲಿ ಹಾಗೂ ಪಟ್ಟಣ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದ್ದರು ನಮಗೂ ಅದಕ್ಕೂ ಸಂಬಂಧವಿಲ್ಲವೆಂಬತೆ ನಮ್ಮ ಮನವಿಗೆ ಇಲ್ಲಿನ ಸದಸ್ಯರು ಆಸಕ್ತಿ ತೋರಿಸದ ಕಾರಣ ಇದನ್ನು ಕೂಡಲೆ ದುರಸ್ಥಿಮಾಡಬೇಕೆಂದು ಆಗ್ರಹಿಸಿ ಇಂದು ಇಲ್ಲಿನ ಬಾಡಿಗೆ ಮಳಿಗೆದಾರರು ಹಾಗೂ ಸಾರ್ವಜನಿಕರು ದಿಢೀರ್ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆ ನಡೆಸಿ ಮಾತನಮಾಡಿದ ಧನಿಕ್ ಕೋಡದಿಣ್ಣೆ ಅವರು ಬೇಕರಿ, ಹೋಟೆಲ್‍ಗಳು ಹಾಗೂ ಕೋಳಿ ಅಂಗಡಿಗಳಿಂದ ಬಿಡುತ್ತಿರುವ ತ್ಯಾಜ್ಯವನ್ನು ಚರಂಡಿಗೆ ಬಿಡದಂತೆ ನಿಗ ವಯಿಸಬೇಕು. ಚರಂಡಿಯನ್ನು ಸ್ವಚ್ಛವಾಗಿ ಇಡುವ ಕೆಲಸ ಮಾಡಬೇಕು. ಜಿಡ್ಡುಗಟ್ಟಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿದ್ದು, ಸಾರ್ವಜನಿಕರಿಗೆ ಸ್ವಚ್ಛತೆಗೆ ಸ್ಪಂಧಿಸುವ ಕೆಲಸ ಮಾಡಬೇಕು ಎಂದರು.
ಇಲ್ಲಿನ ರಸ್ತೆಯಲ್ಲಿರುವ ಚರಂಡಿ ಕೆಲವು ತಿಂಗಳಿನಿಂದ ನೀರು ಸರಿಯಾಗಿ ಸರಾಗವಾಗಿ ಹರಿಯದೇ ಅದರಲ್ಲಿ ಕಸ ಬೆರೆತು ನೀರು ನಿಂತು ಕೊಳೆತು ನಾರುತ್ತಿದ್ದು, ಅದರಿಂದ ಹಲವಾರು ರೀತಿಯ ಸಾಂಕ್ರಾಮಿಕ ರೋಗಕ್ಕೆ ಎಡೆ ಮಾಡಿ ಕೊಟ್ಟಂತಿತ್ತು ಇಲ್ಲಿನ ಪರಿಸ್ಥಿತಿ ಇದರ ಕುರಿತು ಹಲವು ಬಾರಿ ಈ ಹಿಂದಿನ ಸದಸ್ಯರು ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿಯನ್ನು ಕೊಟ್ಟರೂ ಆ ಮನವಿಯು ಪಟ್ಟಣ ಪಂಚಾಯಿತಿಯ ಕಸದ ಬುಟ್ಟಿ ಸೇರಿತ್ತು.
ಇದರಿಂದ ಇಂದು ಆಕ್ರೋಶಗೊಂಡ ಇಲ್ಲಿನ ಬಾಡಿಗೆದಾರರು ಹಾಗೂ ಸಾರ್ವಜನಿಕರು ವಿಷಯವನ್ನು ನೂತನವಾಗಿ ಆಯ್ಕೆಯಾದ ಪಟ್ಟಣ ಪಂಚಾಯಿತಿ ಸದಸ್ಯರಾದ ಹಂಜರವರ ಗಮನಕ್ಕೆ ತರಲಾಯಿತು. ಕೂಡಲೇ ಕಾರ್ಯಪ್ರವೃತರಾದ ಇವರು ಪಟ್ಟಣ ಪಂಚಾಯಿತಿ ಆರೋಗ್ಯಾಧಿಕರಿಗಳ ಗಮನಕ್ಕೆ ತಂದಿದ್ದರಿಂದ ಸ್ಥಳಕ್ಕಾಗಮಿಸಿದ ಆರೋಗ್ಯ ನಿರೀಕ್ಷಕ ಪ್ರಕಾಶ್ ಹಾಗೂ ಮುಖ್ಯಾಧಿಕಾಗಳಾದ ಕಲಾವತಿಯವರು ಪರೀಶಿಲನೆ ನಡೆಸಿ

ಜೆ.ಸಿ.ಬಿ ಮುಖಾಂತರ ಕಟ್ಟಿದಂತ ಸ್ಥಳವನ್ನು ಬಿಡಿಸುವ ಮುಖಾಂತರ ಸಾರ್ವಜನಿಕರ ಅಸಮಾದಾನಕ್ಕೆ ಕೊಂಚ ಸಮಾದಾನವನ್ನು ತಂದರು.
ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಮುಖ್ಯಾಧಿಕಾರಿಗಳು ಇಂತಹ ಯಾವುದೇ ಸಮಸ್ಯೆವಿದ್ದಲ್ಲಿ ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಗೆ ಬಂದು ನನ್ನನ್ನು ಸಂಪಂರ್ಕ ಮಾಡುವ ಕುರಿತು ನಾನು ತಿಳಿಸಿದ್ದು, ನನಗೆ ಪಟ್ಟಣದ ಸ್ವಚ್ಚತೆ ಹಾಗೂ ಪಟ್ಟಣದ ಸೌಂದರ್ಯ ತುಂಬಾ ಮುಖ್ಯ! ಇದರ ನಿಟ್ಟಿನಲ್ಲಿ ನಾನು ಕೆಲಸವನ್ನು ಮಾಡುತ್ತೇನೆ ಅದೇ ರೀತಿ ಪಟ್ಟಣದಲ್ಲಿ ಹಲವಾರು ಜಲ್ವಂತ ಸಮಸ್ಯೆಗಳಿದ್ದು, ಅದನ್ನು ಆದಷ್ಟು ಬೇಗ ಪರಿಹರಿಸುವಲ್ಲಿ ನಾನು ಪ್ರಾಮಾಣಿಕ ರೀತಿ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು. ಹಾಗೂ ವಿಷಯದ ಕುರಿತು ಪಸ್ಟ್ ಸುದ್ದಿಯೊಂದಿಗೆ ಮಾತನಾಡಿದ ನೂತನ ಸದಸ್ಯರಾದ ಹಂಜರವರು ನಾನು ಇಲ್ಲಿನ ಸಮಸ್ಯೆಯನ್ನು ತುಂಬಾ ದಿನಗಳಿಂದ ಬಹಳ ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ ಆದ್ದುದ್ದರಿಂದ ನಾನು ಸಹ ಪ್ರಾಮಾಣಿಕವಾಗಿ ನನ್ನನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸವನ್ನು ಉಳಿಸುತ್ತೇನೆ ಎಂದರು. ಪ್ರತಿಭಟನೆಯಲ್ಲಿ ಅಬ್ಬಾಸ್, ಮೋಹನ್, ಸಂತೋಷ್ ಹ0ಡುಗುಳಿ, ರತನ್ ಊರುಬಗೆ, ಅರಣ್, ನಯಾಸ್, ಜೋಹರ್ ಹಾಗೂ ಇತರರು ಇದ್ದರು.











