ಹೆಣ್ಣು ಕುಲಕ್ಕೆ ಸುಪ್ರೀಂ ಕೋರ್ಟ್​ ನ್ಯಾಯ ನೀಡಿದೆ: ಜಯಮಾಲ…

550
firstsuddi

ಬೆಂಗಳೂರು: ಸುಪ್ರೀಂ ಕೋರ್ಟ್​ ನೀಡಿದ ತೀರ್ಪಿಗೆ ಪ್ರತಿಕ್ರಿಯಿಸಿರುವ ಸಚಿವೆ ಜಯಮಾಲ ಅವರು ತೀರ್ಪು ನನಗೆ ಸಂತಸ ನೀಡಿದೆ. ಹೆಣ್ಣು ಕುಲಕ್ಕೆ ಸುಪ್ರೀಂ ಕೋರ್ಟ್​ ನ್ಯಾಯ ನೀಡಿದೆ. ಇದೊಂದು ಐತಿಹಾಸಿಕ ಕ್ಷಣ ಅವತ್ತೂ ನನಗೆ ದೇವರ ಮೇಲೆ ಹಾಗೂ ನ್ಯಾಯಾಂಗದ ಮೇಲೆ ನಂಬಿಕೆ ಇತ್ತು, ಇಂದು ಅದು ಸತ್ಯವಾಗಿದೆ.  ಸಂವಿಧಾನದಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶ ನೀಡಬೇಕು ಎಂದು ಅಂಬೇಡ್ಕರ್​ ಹೇಳಿದ್ದರು ಇದನ್ನೇ ನ್ಯಾಯಾಲಯ ಎತ್ತಿ ಹಿಡಿದಿದೆ. ಮಹತ್ವದ ತೀರ್ಪು ನೀಡಿದ ನ್ಯಾಯಾಮೂರ್ತಿಗಳಿಗೆ ಧನ್ಯವಾದ ತಿಳಿಸುತ್ತೇನೆ  ಎಂದಿದ್ದಾರೆ.