ಚಿಕ್ಕಮಗಳೂರು: ಬಿಬಿಎಂಪಿಯಲ್ಲಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಪ್ರಯತ್ನ ಮಾಡ್ತಿರೋ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಪವಿತ್ರ ಮೈತ್ರಿ ಒಂದು ಚಾಳಿಯಾಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಬಿಬಿಎಂಪಿಯಲ್ಲಿ ದೊಡ್ಡ ಮಟ್ಟದ ಲೂಟಿ ನಡೆದಿದ್ದು, ಮೈತ್ರಿ ಸರ್ಕಾರ ಇಲ್ಲದ ಆಮೀಷ ಒಡ್ಡಿ ಪಕ್ಷೇತರ ಕಾರ್ಪೋರೇಟರ್‍ಗಳನ್ನ ಸೆಳೆಯುತ್ತಿದ್ದಾರೆ. ಈಗಾಗಲೇ ಬಿಬಿಎಂಪಿಯಲ್ಲೂ ರೆಸಾರ್ಟ್ ರಾಜಕಾರಣ ಶುರುವಾಗಿದೆ. ಬಿಬಿಎಂಪಿಯಲ್ಲಿ ಕಳೆದ ಬಾರಿಯ ದುರಾಡಳಿತ ನೋಡಿ ಈ ಬಾರಿ ಪಕ್ಷೇತರರು ಬಿಜೆಪಿಗೆ ಬೆಂಬಲಿಸುವ ವಿಶ್ವಾಸವಿದೆ, ಆದರೆ ಈ ಬಾರಿಯೂ ಅವರಿಗೆ ಆಮೀಷ ಒಡ್ಡಿ ಹೈಜಾಕ್ ಮಾಡುವ ಪ್ರಯತ್ನ ನಡೆದಿದ್ದು, ಮೈತ್ರಿ ಸರ್ಕಾರ ಬಿಬಿಎಂಪಿ ಗೆಲುವಿಗೆ ಅನೈತಿಕೆ ದಾರಿ ಹಿಡಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.










