ಚಿಕ್ಕಮಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಹಲವು ಧಾರ್ಮಿಕ ವಿಚಾರಗಳಲ್ಲಿ ಕೋರ್ಟಿನ ತೀರ್ಪು ಹೊರತಾಗಿಯೂ ತೀರ್ಮಾನ ಮಾಡಿರೋ ಉದಾಹರಣೆಗಳಿವೆ. ಜನರ ಭಾವನೆಯಂತೆ ಅಲ್ಲಿ ನಿರ್ಧಾರವಾಗಲಿ ಅನ್ನೋದು ನಮ್ಮ ಅಪೇಕ್ಷೆ ಎಂದಿದ್ದಾರೆ. ಧಾರ್ಮಿಕ ಭಾವನೆಗೆ ಎಲ್ಲರೂ ಗೌರವ ಕೊಡಬೇಕೆನ್ನುವುದು ನಮ್ಮ ಅಪೇಕ್ಷೆ. ಶಬರಿಮಲೆಗೆ ಇಡೀ ದೇಶಾದ್ಯಂತ ಕೊಟ್ಯಾಂತರ ಭಕ್ತರಿದ್ದಾರೆ. ಆ ಭಕ್ತರ ಭಾವನೆಯನ್ನ ಮೊದಲು ಅಧ್ಯಯನ ಮಾಡಬೇಕು. ಅದರ ಆಧಾರದ ಮೇಲೆ ಅಲ್ಲಿನ ನಡೆಗಳ ಬಗ್ಗೆ ತೀರ್ಮಾನ ಮಾಡ್ಬೇಕು ಅನ್ನೋದು ನಮ್ಮ ಅಪೇಕ್ಷೆ ಎಂದಿದ್ದಾರೆ.










