ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್, ಉಪ ಮೇಯರ್ ಚುನಾವಣೆ ಇಂದು ನಡೆದಿದ್ದು, ಮೇಯರ್ ಆಗಿ ಕಾಂಗ್ರೆಸ್ ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಆಯ್ಕೆಯಾಗಿದ್ದು , ಉಪಮೇಯರ್ ಆಗಿ ಜೆಡಿಎಸ್ ನ ರಮೀಳಾ ಉಮಾಶಂಕರ್ ಅವರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಬಿಬಿಎಂಪಿಯ ಅಧಿಕಾರ ಸಿಕ್ಕಿದೆ.










