ಚಿಕ್ಕಮಗಳೂರು:ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪ್ರಸ್ತುತ ರಾಜಕೀಯಕ್ಕೆ ಫುಲ್ ಸ್ಟಾಪ್ ಹಾಕಿದ್ದೇನೆ. ವಿರೋಧ ಪಕ್ಷ, ಕಾಂಗ್ರೆಸ್ ಸ್ನೇಹಿತರು, ಬೇರೆ ಬೇರೆ ರೀತಿ ಮಾತನಾಡುತ್ತಾರೆ. ನಾನು ಅದಕ್ಕೆಲ್ಲ ಉತ್ತರ ನೀಡಲ್ಲ. ಬಹುಶ: ಇದೆಲ್ಲಾ ಅಂತ್ಯವಾಗುತ್ತೆ ಎಂಬ ನಂಬಿಕೆ ಇದೆ. ಇನ್ನು ಒಂದು ತಿಂಗಳಲ್ಲಿ ಗೊಂದಲಗಳೆಲ್ಲಾ ಬಗೆಹರಿಯುತ್ತದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೀಟ್ ಹೊಂದಾಣಿಕೆಮಾಡಿಕೊಳ್ಳುವ ಉದ್ದೇಶಕ್ಕಾದ್ರು ಅಂತ್ಯವಾಗುತ್ತದೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಒಡಕು ಬರದ ಹಾಗೆ ನೋಡಿಕೊಳ್ಳುತ್ತೇವೆ. ಇದರಲ್ಲಿ ಎರಡು ಪಕ್ಷಗಳು ಜವಾಬ್ದಾರಿಯಿಂದ ನಡೆದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಬಿಬಿಎಂಪಿ ಮೈತ್ರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಾಳೆಯೇ ಮೈತ್ರಿ ಮುರಿದು ಬಿಳುತ್ತೇ ಎಂಬ ಮಾತುಗಳು ಕೇಳಿಬರ್ತಿದೆ. ಆದರೆ ಆ ರೀತಿ ಅವಕಾಶ ಇಲ್ಲ. ನಾನು ಈ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ. ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ನಾನು ಭಾಗಿಯಾಗಿಲ್ಲ. ಸಿದ್ದರಾಮಯ್ಯ ಸಹ ಸರ್ಕಾರಕ್ಕೆ ಅಪಾಯ ಆಗುವುದಿಲ್ಲ, ಸಿ ಎಂ ಕುಮಾರಸ್ವಾಮಿ ಸಹ ಅದೇ ರೀತಿ ಹೇಳಿದ್ದಾರೆ. ಹಂತ ಹಂತವಾಗಿ ಸಣ್ಣಪುಟ್ಟ ದೋಷಗಳು ಬಗೆಹರಿಯುತ್ತದೆ ಎಂದ ಅವರು ನಂತರ ಬಿಜೆಪಿ ರೆಸಾರ್ಟ್ ರಾಜಕೀಯದ ಕುರಿತು ಪ್ರತಿಕ್ರಿಯಿಸದ ಅವರು ಕೈ ಮುಗಿದು ಬೇಸರ ವ್ಯಕ್ತಪಡಿಸಿದ್ದಾರೆ.










