ಮೂಡಿಗೆರೆ: ತಹಸೀಲ್ದಾರ್ ರವರ ಕಛೇರಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರದಡಿಯಲ್ಲಿ ತಾಲ್ಲೂಕು ಮಟ್ಟದ ಸಲಹಾ ಸಮಿತಿ ಸಭೆಯು ಮಾನ್ಯ ತಹಸೀಲ್ದಾರ್ ಶ್ರೀ. ಪದ್ಮನಾಭ ಶಾಸ್ತ್ರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರುಗಳು ಹಾಜರಿದ್ದರು.
ಸಭೆಯಲ್ಲಿ ಚರ್ಚಿಸಿದ ವಿಷಯಗಳು:
1. ಸಿಗರೇಟ್ಸ್ ಹಾಗೂ ಇತರೆ ತಂಬಾಕು ಉತ್ಪನ್ನಗಳ (ಜಾಹಿರಾತು, ಜಾಹಿರಾತು ನಿಷೇಧ, ವ್ಯಾಪಾರ ವಹಿವಾಟು, ಉತ್ಪಾದನೆ, ಸಾಗಣೆ, ವಿತರಣೆ) ಅಧಿನಿಯಮ -2003 ರ ಅಡಿಯಲ್ಲಿ ಸೆಕ್ಷನ್ 4 ರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕುರಿತು ಚರ್ಚಿಸಲಾಯಿತು.
2. ಸಾರ್ವಜನಿಕ ಸ್ಥಳದ ಮಾಲೀಕರು 60*45 ಸೇ.ಮೀ ಇರುವಂತಹ ನಾಮಫಲಕಗಳನ್ನು ಕಡ್ಡಾಯವಾಗಿ ಅಂಗಡಿ ಮುಂಗಟ್ಟಿನಲ್ಲಿ ಪ್ರದರ್ಶನ ಮಾಡುವುದು, ಯಾರಿಗೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಲು ಅವಕಾಶ ನೀಡದೆ ಇರುವುದು.
3. 18 ವರ್ಷದೊಳಗಿನ ಮಕ್ಕಳು ತಂಬಾಕು ಸೇವನೆ ಮಾಡಬಾರದೆನ್ನುವ ಉದ್ದೇಶದಿಂದ ಸೆಕ್ಷನ್ 6(ಎ) ಪ್ರಕಾರ 60*30 ರ ಅಳತೆಯ ನಾಮಫಲಕವನ್ನು ಪ್ರದರ್ಶಿಸುವಂತೆ ತಿಳಿಸಿದರು.
4. ಸಾರ್ವಜನಿಕರ ಕುರಿತು ತಂಬಾಕು ಉತ್ಪನ್ನಗಳ ಸೇವನೆಯಿಂದ ಹಲವಾರು ಗಂಭಿರ ಖಾಯಿಲೆಗಳಿಗೆ ತುತ್ತಾಗುವುದಲ್ಲದೆ ಕುಟುಂಬದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತದೆ. ಆದರಿಂದ ವ್ಯಸನ ಮುಕ್ತ ಸಮಾಜವನ್ನು ರೂಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಸಭೆಯಲ್ಲಿ ಡಾ. ಸುಂದರೇಶ್ ಹೆಚ್.ಎನ್. ತಾಲ್ಲೂಕು ಆರೋಗ್ಯಾಧಿಕಾರಿಗಳು ಮೂಡಿಗೆರೆ ಇವರು ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಶ್ರಿ ದಿನೇಶ್ ಆರ್. ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಚಿಕ್ಕಮಗಳೂರು ಇವರು ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಿಬ್ಬಂದಿಗಳು, ಪೋಲೀಸ್ ಇಲಾಖೆ ಸಿಬ್ಬಂದಿಗಳು, ಶಿಕ್ಷಣ ಇಲಾಖೆಯ ಸಿಬ್ಬಂಧಿ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಪೊಲೀಸ್ ಇಲಾಖಾ ಸಿಬ್ಬಂಧಿ ಇತರರು ಉಪಸ್ಥಿತರಿದ್ದರು. ಸಭೆಯಲ್ಲಿ ಶ್ರೀ ಮಂಜುನಾಥ ತಾಲ್ಲೂಕು ಹಿ.ಪು.ಆ.ಸ ಇವರು ಸ್ವಾಗತಿಸಿ ವಂದಿಸಿದರು.
ತಹಶೀಲ್ದಾರರು ಹಾಗೂ ಶಿರಸ್ತೇದಾರರ ಅಪ್ಪಣೆ ಮೇರೆಗೆ ದಿನಾಂಕ-03.01.2019 ರಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಮೂಡಿಗೆರೆ ತಾಲ್ಲೂಕು ತನಿಖಾ ದಳದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮೂಡಿಗೆರೆ ನಗರದ ವಿವಿಧ ಪ್ರದೇಶಗಳಲ್ಲಿ ತಂಬಾಕು ನಿಯಂತ್ರಣ ಕಾನೂನು ಕೊಟ್ಪಾ-2003 ರ ಕಾಯ್ದೆಯ ಅಡಿಯಲ್ಲಿ ಸಿಗರೇಟ್ಸ್ ಹಾಗೂ ಇತರೆ ತಂಬಾಕು ಉತ್ಪನ್ನಗಳ (ಜಾಹಿರಾತು, ಜಾಹಿರಾತು ನಿಷೇಧ, ವ್ಯಾಪಾರ ವಹಿವಾಟು, ಉತ್ಪಾದನೆ, ಸಾಗಣೆ, ವಿತರಣೆ) ಅಧಿನಿಯಮ -2003ರ ಅಡಿಯಲ್ಲಿ ದಾಳಿ ನೆಡೆಸಿ ಹೋಟೆಲ್, ಬಸ್‍ನಿಲ್ದಾಣಗಳು, ಅಂಗಡಿ ಮುಂಗಟ್ಟು ಹಾಗೂ ಶಾಲಾ ಆವರಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಇನ್ನಿತರ ಉಲ್ಲಂಘನೆಯ ವಿರುದ್ದ ಕ್ರಮ ಜರುಗಿಸಿ ಒಟ್ಟು 06 ಪ್ರಕರಣಗಳನ್ನು ದಾಖಲಿಸಿ ರೂ 950/-ಗಳ ದಂಡ ವಿಧಿಸಲಾಯಿತು.










