ಬೆಂಗಳೂರು- ಶಶಾಂಕ್ 12 ವರ್ಷದ ಬಾಲಕ ಮಾರಕ ರೋಗದಿಂದ ಬಳಲುತ್ತಿದ್ದು, ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಬಾಲಕನಿಗೆ ಒಂದು ದಿನದ ಪೊಲೀಸ್ ಇನ್ಸ್ ಪೆಕ್ಟರ್ ಆಗುವ ಆಸೆಯನ್ನು ಹೊಂದಿದ್ದು, ಈ ಆಸೆಯನ್ನು ಈಡೇರಿಸುವಲ್ಲಿ ವಿವಿ ಪುರಂ ಪೊಲೀಸರು ಸಾಥ್ ನೀಡಿದ್ದಾರೆ.ಬಾಲಕನಿಗೆ ಇನ್ಸ್ ಪೆಕ್ಟರ್ ಆಗಲು ಅವಕಾಶವನ್ನು ನೀಡಿದ್ದು, ಸಮವಸ್ತ್ರ ಧರಿಸಿ ಇನ್ಸ್ ಪೆಕ್ಟರ್ ಚೇರ್ ನಲ್ಲಿ ಕುಳಿತು ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಇನ್ಸ್ ಪೆಕ್ಟರ್ ಹೇಗೆ ಕೆಲಸ ಮಾಡುತ್ತಾರೋ ಅದೇ ರೀತಿಯಲ್ಲೇ ಆತನಿಗೆ ಹಕ್ಕು ನೀಡಿದ್ದಾರೆ. ಇವತ್ತಿನ ಮಟ್ಟಿಗೆ ಶಶಾಂಕ್ ವಿವಿಪುರಂ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಲಿದ್ದಾನೆ.