2019ರ ಏರ್ ಇಂಡಿಯಾ ಶೋ ಬೆಂಗಳೂರಿನಲ್ಲೇ ನಡೆಯಲಿದೆ…

1099
firstsuddi

ಬೆಂಗಳೂರು: 2019ರ ಏರೋ ಇಂಡಿಯಾ ಏರ್ ಶೋ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ಮೂಲಕ ಉತ್ತರ ಪ್ರದೇಶದ ಲಕ್ನೋಗೆ ಏರ್ ಶೋ ಸ್ಥಳಾಂತರವಾಗಲಿದೆ ಎನ್ನುವ ಸುದ್ದಿಗೆ ಪೂರ್ಣವಿರಾಮ ಬಿದ್ದಿದೆ. ಸರ್ಕಾರ ಏರೋ ಇಂಡಿಯಾ 2019ರ ಕಾರ್ಯಕ್ರಮವನ್ನು ಫೆಬ್ರುವರಿ 20ರಿಂದ 24ರವರೆಗೆ ಬೆಂಗಳೂರಿನಲ್ಲೆ ನಡೆಸಲು ತಿರ್ಮಾನಿಸಿದ್ದು, ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಏರ್ ಷೋವನ್ನು ಬೇರೆಡೆ ಸ್ಥಳಾಂತರಿಸುವುದಕ್ಕೆ ಭಾರೀ ಚರ್ಚೆಗಳು ಉಂಟಾಗಿದ್ದವು.  ಈ ಎಲ್ಲಾ ಚರ್ಚೆಗಳ ನಂತರ ಏರ್​ಶೋ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಅಧೀಕೃತ ಆದೇಶ ಹೊರಬಿದ್ದಿದೆ.