ಮಂಡ್ಯ: ತನ್ನ ತಾಯಿಗೆ ಬೈದನೆಂದು ಮಗನೋರ್ವ ಸ್ನೇಹಿತನ ತಲೆಯನ್ನೇ ಕಡಿದು ಪೊಲೀಸ್ ಠಾಣೆಗೆ ತಂದು ಶರಾಣಾಗಿರುವ ಘಟನೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಶುಪತಿ ಎಂಬಾತ ಗಿರೀಶ್(35)ಎಂಬಾತನ ರುಂಡವನ್ನು ಕಡಿದು ಪೊಲೀಸ್ ಠಾಣೆಗೆ ತಂದಿದ್ದು, ಗಿರೀಶ್ ಮತ್ತು ಪಶುಪತಿ ಸ್ನೇಹಿತರಾಗಿದ್ದು, ತನ್ನ ತಾಯಿಗೆ ಗಿರೀಶ್ ಬೈದನೆಂದು ಪಶುಪತಿಯು ಗಿರೀಶ್ ರುಂಡವನ್ನು ಕತ್ತರಿಸಿದ್ದಾನೆ.ಗಿರೀಶ್‍ನ ರುಂಡ ಕತ್ತರಿಸಿದ ಪಶುಪತಿ ರುಂಡ ಹಿಡಿದುಕೊಂಡೇ ಪೊಲೀಸ್ ಠಾಣೆಗೆ ಬಂದಿದ್ದಾನೆ. ರುಂಡದೊಂದಿಗೆ ಠಾಣೆಗೆ ಬಂದ ಪಶಪತಿಯನ್ನು ನೋಡಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










