ಒಂದೇ ಮಾತರಂ ಹೇಳುವಂತೆ ಎಲ್ಲರೂ ಒಂದಾಗಿ ಸ್ವಚ್ಚತೆಯಲ್ಲಿ ನಿರತರಾಗೋಣ: ವಿನಯ್ ಗುರೂಜಿ.

727

ಚಿಕ್ಕಮಗಳೂರು : ಇತ್ತೀಚೆಗೆ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದ್ದ ಅವಧೂತ ವಿನಯ್ ಗುರೂಜಿ ಅವರು ಗಾಂಧಿ ಜಯಂತಿ ಸಮೀಪಿಸುತ್ತಿರೋ ಅಂಗವಾಗಿ ಸ್ವಚ್ಚತಾ ಆಂದೋಲನಕ್ಕೆ ಕರೆ ನೀಡಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮದ ಹಲವೆಡೆ ವಿನಯ್ ಗುರೂಜಿಯವರೆ ಮಹಾತ್ಮ ಗಾಂಧಿ ಟ್ರಸ್ಟ್ ವತಿಯಿಂದ ಗ್ರಾಮದ ಹಲವೆಡೆ ಸ್ವಚ್ಚಗೊಳಿಸಿದ್ದು, ತಾವೇ ರಸ್ತೆ ಬದಿ ಕಸ ಗುಡಿಸುವ ಮೂಲಕ ಕರೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಒಂದೇ ಮಾತರಂ ಹೇಳುವಂತೆ ಎಲ್ಲರೂ ಒಂದಾಗಿ ಸ್ವಚ್ಚತೆಯಲ್ಲಿ ನಿರತರಾಗೋಣ ಎಂದು ಕರೆ ನೀಡಿದ್ದಾರೆ.

 

firstsuddi