ಚಾರ್ಮಾಡಿ ಘಾಟಿಯಲ್ಲಿ ವಾಹನ ಅಪಘಾತ ಅಥವಾ ಹಾಳಾದರೆ ‘ಪರಶುರಾಮ್’ ಕ್ರೇನ್ ನಿಂದ ಉಚಿತ ಸೇವೆ…

530
firstsuddi

ಮೂಡಿಗೆರೆ: ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್‍ನಲ್ಲಿ ಯಾವುದೇ ಪ್ರವಾಸಿಗರ ವಾಹನ ಅಪಘಾತ ಅಥವಾ ರಸ್ತೆಯ ಮದ್ಯದಲ್ಲಿ ಕೆಟ್ಟು ನಿಂತರೆ ಪ್ರವಾಸಿಗರು ಯಾವುದೇ ಕಾರಣಕ್ಕೂ ದೃತಿ ಪಡಬೇಕಾಗಿಲ್ಲ. ಏಕೆಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,ಉಪವಿಭಾಗ ಸಕಲೇಶಪುರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ಇವರ ಆಶ್ರಯದಲ್ಲಿ ‘ಪರಶುರಾಮ್’ ಎಂಬ ಕ್ರೇನ್ ನನ್ನು ಚಾರ್ಮಾಡಿ ಘಾಟ್‍ಗೆ ತೆರವು ಕಾರ್ಯಾಚರಣೆಯ ಕರ್ತವ್ಯದಲ್ಲಿ ಉಚಿತವಾಗಿ ನಿಯೋಜಿಸಲಾಗಿದೆ.ಒಂದು ವೇಳೆ ಚಾರ್ಮಾಡಿ ಘಾಟ್‍ನಲ್ಲಿ ಯಾವುದೇ ವಾಹನ ಕೆಟ್ಟು ನಿಂತರೆ ಅಥವಾ ಪಲ್ಟಿ ಹೊಡೆದರೆ ಅದನ್ನು ಬದಿಗೆ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರ ಉಚಿತ ಸೇವೆ ಕೊಟ್ಟಿಗೆಹಾರದಲ್ಲಿ ಕ್ರೇನ್ ನಿಯೋಜಿಸುವ ಮೂಲಕ ಮಾಡಿದೆ.’ಪರಶುರಾಮ್’ ಎಂಬ ಕ್ರೇನ್ ನಿಮ್ಮ ವಾಹನವನ್ನು ರಸ್ತೆಯಿಂದ ಬದಿಗೆ ಹಾಕಿ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರಾಧಿಕಾರದ ಅಧಿಕಾರಿಗಳು ಇಂತಹ ಉಚಿತ ಸೇವೆಗೆ ಕ್ರೇನ್ ಮಾಲಿಕ ದಯಾನಂದ ಮೂರ್ತಿ ಎಂಬವರಿಗೆ ಗುತ್ತಿಗೆ ನೀಡಿದ್ದು ಕ್ರೇನ್ ನಿಂತ ಕೊಟ್ಟಿಗೆಹಾರದಲ್ಲಿ ಕ್ರೇನ್ ಆಪರೇಟರ್ ಶ್ರೀಜಿತ್ ಹಾಗೂ ವಾಹನ ಚಾಲಕ ಸೀಲು ಎಂಬವರು ನಿಮಗೆ ಶೀಘ್ರ ಸೇವೆಗೆ ದೊರಕಲಿದ್ದಾರೆ.ರಾ.ಹೆ.ಪ್ರಾಧಿಕಾರದ ಅಧಿಕಾರಿಗಳು ಚಾರ್ಮಾಡಿ ಘಾಟ್ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಶೀಘ್ರ ತೆರವು ಕಾರ್ಯಕ್ಕೆ ಈ ಯೋಜನೆ ರೂಪಿಸಿದ್ದಾರೆ.ಪ್ರವಾಸಿಗರು ಕೊಟ್ಟಿಗೆಹಾರ ಪಾರೆಸ್ಟ್ ಗೇಟ್ ಬಳಿ ಸಂಪರ್ಕಕ್ಕಾಗಿ ಕ್ರೇನ್ ಆಪರೇಟರ್ ಸಂಖ್ಯೆ 7899117852/9449706061 ಸಂಖ್ಯೆಗೆ ಕರೆ ಮಾಡಿ ಈ ಸೇವೆ ಬಳಸಬಹುದಾಗಿದೆ.

 

firstsuddi