ಪತ್ನಿಯ ತಲೆ‌ ಕಡಿದು ಠಾಣೆಗೆ ತಂದಿದ್ದ ಆರೋಪಿ ಆತ್ಮಹತ್ಯೆಗೆ ಯತ್ನ…

492
firstsuddi

ಚಿಕ್ಕಮಗಳೂರು :  ಪತ್ನಿಯ ತಲೆ ಕಡಿದು ಠಾಣೆಗೆ ತಂದಿದ್ದ ಆರೋಪಿ ಆತ್ಮಹತ್ಯೆಗೆ ಯತ್ನಸಿರುವ ಘಟನೆ  ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಸೆಪ್ಟೆಂಬರ್ 9 ರಂದು ಪತ್ನಿ ರೂಪ ತಲೆ ಕಡಿದು ಅಜ್ಜಂಪುರ ಠಾಣೆಗೆ ತಂದಿದ್ದ  ಆರೋಪಿ ಸತೀಶ್  ಕುತ್ತಿಗೆಗೆ ವುಲ್ಲನ್ ಸ್ವೆಟರ್ ಬಿಗಿದುಕೊಂಡಿದ್ದು, ಸ್ವೆಟರ್ ನ ದಾರದಿಂದ ಮರ್ಮಾಂಗ ಹಾಗೂ ವೃಷಣಗಳ ಮಧ್ಯೆ ಗಟ್ಟಿಯಾಗಿ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಸಿದ್ದು, ನೋವಿನಿಂದ ಕಿರುಚಿಕೊಳ್ಳುತ್ತಿದ್ದಂತೆ ಕಾರಾಗೃಹ ಸಿಬ್ಬಂದಿ ಆರೋಪಿ ಸತೀಶನನ್ನು ರಕ್ಷಣೆ ಮಾಡಿದ್ದಾರೆ. ಸತೀಶ್ ಗೆ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್  ಆಸ್ಪತ್ರೆಗೆ  ಭದ್ರತೆಯಲ್ಲಿ ರವಾನೆ ಮಾಡಲಾಗಿದೆ.