ಕಳಸ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ರೋಗಿಗಳಿಂದ ಹಣ ವಸೂಲಿ ಆರೋಪ…

557
firstsuddi

ಕಳಸ:ಇಲ್ಲಿಯ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಿಪಿಐ ಮುಖಂಡ ಲಕ್ಷ್ಮಣಾಚಾರ್ ಆರೋಪಿಸಿದ್ದಾರೆ.ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಯುರ್ವೇದಿಕ್ ವೈದ್ಯರು ರೋಗಿಗಳಿಗೆ ಡ್ರಿಪ್ ಹಾಕಿ ಮಾತ್ರೆಗಳನ್ನು ಕೊಟ್ಟು ಅವರಿಂದ ಅಧಿಕ ಪ್ರಮಾಣದಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ.ಇಲ್ಲಿಯ ಗಂಗನಕುಡಿಗೆಯ ಕಾರ್ಮಿಕ ಮಹಿಳೆ ಅಪ್ಪಿಯಮ್ಮ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದರು ಈ ಸಂದರ್ಭದಲ್ಲಿ ಆಯುರ್ವೇದಿಕ್ ವೈದ್ಯರು ಔಷದಿಯನ್ನು ನೀಡಿ 150 ರೂ ವಸೂಲಿ ಮಾಡಿಕೊಂಡಿದ್ದಾರೆ.ಈ ರೀತಿಯಾಗಿ ಹಲವಾರು ರೋಗಿಗಳ ಬಳಿ ಹಣ ವಸೂಲಿ ಮಾಡಿರುವ ದೂರುಗಳು ನಮ್ಮ ಗಮನಕ್ಕೆ ಬಂದಿದೆ.
ಈ ಆಸ್ಪತ್ರೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಕೆಲಸ ಮಾಡಿದ ವೈದ್ಯರುಗಳು ಉತ್ತಮ ಹೆಸರನ್ನು ಗಳಿಸಿಕೊಂಡಿದ್ದಾರೆ. ಇಲ್ಲಿರುವ ಡಾ|ಸಂದೀಪ್ ಆಸ್ಪತ್ರೆಗೆ ಬೇಕಾಗಿರುವ ಹೆಚ್ಚಿನ ಸವಲತ್ತುಗಳನ್ನು ಹಾಗೂ ಔಷದಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.ಆದರೆ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿರುವುದರಿಂದ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಇದನ್ನೆ ಬಂಡವಾಳನ್ನಾಗಿಸಿಕೊಂಡು ಇಲ್ಲಿಯ ಆಯುರ್ವೇದಿಕ್ ವೈದ್ಯರು ತನ್ನ ಸ್ವಾರ್ಥಕ್ಕಾಗಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ.ಈ ಸಂಬಂದವಾಗಿ ಈಗಾಗಲೇ ಸಂಬಂದ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಕೂಡಲೇ ಇಂತಹ ವೈದ್ಯರನ್ನು ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥರೆಂದು ಸಾಬೀತಾದರೆ ಕೂಡಲೇ ಕೆಲಸದಿಂದ ವಜಾಗೊಳಿಸಬೇಕೆಂದು ಲಕ್ಷ್ಮಣಾಚಾರ್ ತಿಳಿಸಿದ್ದಾರೆ.