ನವದೆಹಲಿ- ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಆಡಳಿತ ಪಕ್ಷ ಎನ್ ಡಿ ಎ ಅಭ್ಯರ್ಥಿಯಾಗಿ ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್ ಅವರನ್ನು ಘೋಷಿಸಲಾಗಿದ್ದು, ಯುಪಿಎ ಯಿಂದ ಕಾಂಗ್ರೆಸ್ ಸಂಸದ ಬಿ.ಕೆ. ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಲಾಗಿದ್ದು, ಇಂದು 11 ಗಂಟೆಗೆ ಸಂಸತ್ ಭವನದಲ್ಲಿ ನಡೆಯಲಿರುವ ಉಪಸಭಾಪತಿ ಚುನಾವಣೆಯಲ್ಲಿ ಯಾರಿಗೆ ಉಪಸಭಾಪತಿ ಹುದ್ದೆ ಒಲಿಯಲಿದೆ ಎಂದು ಕಾದು ನೋಡಬೇಕಾಗಿದೆ.