ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಹರಿವಂಶ ನಾರಾಯಣ ಸಿಂಗ್ ಆಯ್ಕೆ…

297

ನವದೆಹಲಿ- ರಾಜ್ಯಸಭಾ ಉಪಸಭಾಪತಿ ಆಯ್ಕೆಯಲ್ಲಿ ಎನ್ ಡಿ ಎ ಜಯ ಗಳಿಸಿದ್ದು. ಯುಪಿಎ ಅಭ್ಯರ್ಥಿ, ಬಿ.ಕೆ.ಹರಿಪ್ರಸಾದ್ ಹಾಗೂ ಎನ್ ಡಿ ಎ ಅಭ್ಯರ್ಥಿಯಾಗಿ ಹರಿವಂಶ್ ನಾರಾಯಣಸಿಂಗ್ ನಡುವೆ ನೇರ ಹಣಾಹಣಿ ನಡೆದಿತ್ತು. ಇಂದು ವೆಂಕಯ್ಯನಾಯ್ಡು ಅವರ ನೇತೃತ್ವದಲ್ಲಿ ನಡೆದ ಮತದಾನದಲ್ಲಿ ಎನ್ ಡಿ ಎ ಅಭ್ಯರ್ಥಿ ಹರಿವಂಶ್ ನಾರಾಯಣಸಿಂಗ್ ಜಯ ಸಾಧಿಸಿದ್ದು, ಒಟ್ಟು ಹಾಜರಿದ್ದ ಸದಸ್ಯರ ಪೈಕಿ 125 ಮತಗಳನ್ನು ಹರಿವಂಶ್ ನಾರಾಯಣಸಿಂಗ್ ಪಡೆದರೆ , ಹರಿಪ್ರಸಾದ್ ಅವರು 105 ಮತಗಳನ್ನು ಪಡೆದಿದ್ದಾರೆ.