ಚಿಕ್ಕಮಗಳೂರು: ಸರ್ಕಾರವನ್ನ ಬೀಳಿಸಿ ಅಧಿಕಾರ ಹಿಡಿಯಬೇಕೆಂಬ ಯೋಚನೆ ಬಿಜೆಪಿಗಿಲ್ಲ. ಆದ್ರೆ, ಇದು ಜನಬೆಂಬಲವಿಲ್ಲದೆ, ಯಾರಿಗೂ ಬೇಡವಾಗಿರೋ ಸರ್ಕಾರ, ಈ ಸರ್ಕಾರ ಬಿದ್ದರೆ ಅಳೋದಕ್ಕೂ ಜನ ಇರಲ್ಲ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಬಿಜೆಪಿ ಹೊರಗಿಡಲು ಮೈತ್ರಿ ಮಾಡಿಕೊಳ್ಳುತ್ತೇವೆಂಬ ಹೇಳಿಕೆ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿ, ಹಿರಿಯರು, ಮುತ್ಸದ್ಧಿ, ಈ ಇಳಿವಯಸ್ಸಲ್ಲೂ ಬಿಜೆಪಿ ದೂರ ಇಟ್ಟು ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ. ಇವರು ಬೇಕಿದ್ರೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿ, ಈಗ ನಾವಿಬ್ಬರು ಒಂದಾಗೋಣ ಅನ್ನೋದು ಜನರಿಗೆ ಮಾಡುವ ದ್ರೋಹ ಎಂದು ಗೌಡರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.