ಬಿಜೆಪಿಯವರು ಸಿಎಎ-ಎನ್‌ಆರ್‌ಸಿ ಅನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ, ಸಮಾಜದ ಹಾದಿ ತಪ್ಪಿಸಲು ಹೊರಟಿದ್ದಾರೆ : ಸಿದ್ದರಾಮಯ್ಯ.

174
firstsuddi

ಬೆಂಗಳೂರು : ಬಿಜೆಪಿಯವರು ಸಿಎಎ-ಎನ್‌ಆರ್‌ಸಿ ಅನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ, ಸಮಾಜದ ಹಾದಿ ತಪ್ಪಿಸಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವೀಟ್‍ನಲ್ಲಿ, “ಬಿಜೆಪಿಯವರು ಸಿಎಎ-ಎನ್ಆರ್ಸಿ ಅನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ, ಸಮಾಜದ ಹಾದಿ ತಪ್ಪಿಸಲು ಹೊರಟಿದ್ದಾರೆ. ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಾ, ಇದನ್ನು ವಿರೋಧಿಸುವವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುತ್ತಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟುಹೋಗಿದೆ. ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೆ ಪೂರಕ ವಾತಾವರಣ ಇಲ್ಲದ ಹೊರತಾಗಿಯೂ ಇದ್ದಕ್ಕಿದ್ದಂತೆ ಸೆಕ್ಷನ್ ಜಾರಿ ಮಾಡಿರುವುದು ನಿಯಮ ಬಾಹಿರ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಈ ಪ್ರತಿಭಟನೆ ವೇಳೆ ಗೋಲಿಬಾರ್ ಮಾಡಿಸಿ ಇಬ್ಬರು ಅಮಾಯಕರನ್ನು ಬಲಿಪಡೆದಿರುವುದು ಸರ್ಕಾರದ ರಾಕ್ಷಸಿ ಪ್ರವೃತ್ತಿಯನ್ನು ತೋರಿಸುತ್ತಿದೆ.” ಎಂದು ವಾಗ್ದಾಳಿ ನಡೆಸಿದ್ದಾರೆ.