ಬಿಜೆಪಿಗೆ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ:ಸಿದ್ದರಾಮಯ್ಯ…

262
firstsuddi

ಬೆಂಗಳೂರು: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತದ ಸಂವಿಧಾನವನ್ನು ಎಂದೂ ಒಪ್ಪದ ಆರ್ ಎಸ್ಎಸ್ ನ ಕೈಗೂಸಾಗಿರುವ ಬಿಜೆಪಿಗೆ ಕೂಡಾ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಈ ದುಷ್ಟ ಚಿಂತನೆಯ ಫಲವೇ ‘ಅಪರೇಷನ್ ಕಮಲ’.
2008ರಲ್ಲಿ ಬಳ್ಳಾರಿಯ ಗಣಿಲೂಟಿಕೋರರಾದ ರೆಡ್ಡಿಗಳ ಅಕ್ರಮ ಹಣದ ಕೆಸರಲ್ಲಿ ಹುಟ್ಟಿಕೊಂಡದ್ದೇ ‘ಅಪರೇಷನ್ ಕಮಲ’. ಬಿಜೆಪಿ ಈಗಲೂ ಅದೇ ಕೆಸರಲ್ಲಿ ಉರುಳಾಡುತ್ತಿದೆ. ಇದು ‘ಸ್ಚಚ್ಛ ಭಾರತ’ದ ಬಿಜೆಪಿ ಮಾದರಿ ಎಂದು ಟ್ವಿಟ್ ಮಾಡಿದ್ದಾರೆ.