ಮಂಟಪಕ್ಕೆ ಹೊರಡುವ ವೇಳೆ ಮೊದಲ ಮದುವೆಯ ರಹಸ್ಯ ಬಾಯ್ಬಿಟ್ಟ ಚಿಕ್ಕಮಗಳೂರಿನ ವಧು…

445
firstsuddi

ಮೈಸೂರು: ಕಲ್ಯಾಣ ಮಂಟಪಕ್ಕೆ ಹೋಗುವ ವೇಳೆ ನನಗೆ ಮೊದಲೇ ಮದುವೆ ಆಗಿದೆ ಎಂದು  ವಧುವೊಬ್ಬರು ತಿಳಿಸಿ ಮದುವೆ ಮುರಿದು ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ವಧುವಿಗೆ ಮೈಸೂರಿನ ಟಿ ನರಸೀಪುರದ ಮೂಲದ ನಿಖಿಲ್ ಅರಸ್ ಎಂಬುವವರಿಗೆ ಮದುವೆ ನಿಶ್ಚಿಯವಾಗಿತ್ತು. ವಧು ಮನೆಯವರ ಒತ್ತಾಯದ ಮೇರಿಗೆ ನಿಖಿಲ್ ಅರಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮದುವೆಗೆಂದು ಚಿಕ್ಕಮಗಳೂರಿನಿಂದ ಮೈಸೂರಿಗೆ ಬರುವವರೆಗೂ ವಧು ಸುಮ್ಮನೆ  ಇದ್ದು,  ಕಲ್ಯಾಣ ಮಂಟಪಕ್ಕೆ ಹೋಗುವ ವೇಳೆ ವಧು ತಾನು ಈ ಮುಂಚೆ ಪ್ರಿಯಕರನೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದು, ಈಗ ಮತ್ತೊಂದು ಮದುವೆಯಾಗುವುದಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾರೆ. ವಧುವಿನ ನಿರೀಕ್ಷೆಯಲ್ಲಿದ್ದ ವರನ ಕಡೆಯವರಿಗೆ ವಿಷಯ ತಿಳಿದು ಬೆಚ್ಚಿಬಿದ್ದಿದ್ದಾರೆ. ಆದರೆ ಮದುವೆ ಆಗಿರುವ ವಿಷಯ ತಿಳಿದ ನಂತರವೂ ಮತ್ತೊಂದು ಮದುವೆಗೆ ಎರಡು ಕುಟುಂಬದವರು ವಧುವನ್ನು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.