ಚಾಮರಾಜನಗರ: ಬಿಎಸ್ ಪಿ ನಡಿಗೆ ಪಾರ್ಲಿಮೆಂಟ್ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎನ್.ಮಹೇಶ್ ಅವರು ಸಮಾಜದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಅಸ್ಥಿತ್ವದಲ್ಲಿ ಇರುವವರೆಗು ಜಾತಿ ವ್ಯವಸ್ಥೆ ಜೀವಂತವಾಗಿರುತ್ತದೆ. 70 ವರ್ಷಗಳಿಂದ ಸಂಘ ಪರಿವಾರದವರು ಚಳುವಳಿ ಮಾಡಿಕೊಂಡು ಭಾರತೀಯ ಜನತಾ ಪಾರ್ಟಿ ಸೃಷ್ಟಿಯಾಗಿದೆ, ಆದರೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಯಾವುದೇ ಕೊಡುಗೆ ನೀಡಿಲ್ಲ. ಬಿಎಸ್ ಪಿ ಕೇವಲ ದಲಿತರ ಪಕ್ಷ ಅಲ್ಲ, ಅದು ಎಲ್ಲಾ ವರ್ಗದವರ ಪಕ್ಷ ಎಂದಿದ್ದಾರೆ.










