ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಗಳು ಪ್ರವಾಸ ಮಾಡಲೇಬೇಕಾದ ಅಗತ್ಯವಿಲ್ಲ. -ಜಗದೀಶ್ ಶೆಟ್ಟರ್.

322
firstsuddi

ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಿ ಮೂರು ತಿಂಗಳು ಕಳೆದರೂ, ಎಂ ಎಲ್ ಎ ಫಂಡ್ ಬಿಡುಗಡೆ ಗೊಳಿಸಿಲ್ಲ. ಅನುದಾನ ಬಿಡುಗಡೆಗೊಳ್ಳದ ಕಾರಣ ಶಾಸಕರಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಪ್ರವಾಸ ಮಾಡಲೇಬೇಕಾದ ಅವಶ್ಯಕತೆ ಇಲ್ಲ. ಹಾಸನಕ್ಕೆ ತೋರುವ ಕಾಳಜಿಯನ್ನು ಇಲ್ಲಿಗೂ ತೋರಿಸಲಿ. ಸಚಿವ ಸಂಪುಟ ಸಭೆ ಕರೆದು, ಇಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿಗೆ ಅನುಮೋದನೆ ನೀಡಲಿ. ಸರ್ಕಾರಿ ನೌಕರರ ಸಂಬಳ, ಗುತ್ತಿಗೆದಾರರ ಬಿಲ್ ಸಹ ಬಿಡುಗಡೆಗೊಳಿಸಲು ಸರ್ಕಾರ ವಿಳಂಬ ತೋರುತ್ತಿದೆ ಎಂದು ಕುಮಾರಸ್ವಾಮಿ ಸರ್ಕಾರದ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದ್ದಾರೆ.