ಚಾರ್ಮಾಡಿ ಘಾಟ್ ನಲ್ಲಿ ಗುಡ್ಡಗಳ ಕುಸಿತ ಹಿನ್ನಲೆ ಎರಡು ದಿನ ಸಂಚಾರ ಸಂಪೂರ್ಣ ಸ್ಥಗಿತ.

431
firstsuddi

ಮೂಡಿಗೆರೆ- ಚಾರ್ಮಾಡಿ ಘಾಟ್ ನಲ್ಲಿ ನಿರಂತರ ಮಳೆ ಹಿನ್ನಲೆಯಲ್ಲಿ ಚಾರ್ಮಾಡಿ ರಸ್ತೆಯನ್ನು ಎರಡು ದಿನ ಬಂದ್ ಮಾಡಲಾಗಿದೆ. ಕಳೆದ 24 ಗಂಟೆಯಿಂದ ಘಾಟ್ ನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಮಾತ್ರ ತೆರಳಲು ಅವಕಾಶ ಮಾಡಲಾಗಿದ್ದು, ಹಾಗೂ ಅಂಬುಲೆನ್ಸ್ ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ತೆರವು ಕಾರ್ಯಚರಣೆಗೆ ಮಳೆ ನಿಲ್ಲದಿರುವುದು ಅಡ್ಡಿಯಾಗಿದ್ದು, ಅಲ್ಲಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಗುಡ್ಡ ಕುಸಿತ ಬಗ್ಗೆ ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ,ಅರಣ್ಯ ಇಲಾಖೆ,ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಚಾರ್ಮಾಡಿ ಘಾಟ್ ರಸ್ತೆ ಕುಸಿತದ ಪರಿಶೀಲನೆ ನಂತರ ಸಂಚಾರದ ಬಗ್ಗೆ ನಿರ್ಧಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.