ಪುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಕಂಟೇನರ್ ಲಾರಿ  ಹರಿದು  ಬಾಲಕನೋರ್ವನ ದುರ್ಮರಣ… 

201
firstsuddi

ಬೆಂಗಳೂರು: ಪುಟ್  ಪಾತ್ ಮೇಲೆ  ಮಲಗಿದ್ದವರ ಮೇಲೆ  ಕಂಟೇನರ್ ಲಾರಿ ಹರಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ  ನೆಲಮಂಗಲದ ಜಾಸ್ ಟೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಜೋತು ಚೌಹಾನ್ (14 ) ಮೃತ ದುರ್ದೈವಿ. ಮಹಾರಾಷ್ಟ್ರ ಮೂಲದ ಒಂದೇ ಕುಟುಂಬದ 15 ಮಂದಿ ನೆಲಮಂಗಲದ ಜಾಸ್ ಟೋಲ್ ಬಳಿ ಫುಟ್ ಪಾತ್ ಮೇಲೆ ಮಲಗಿದ್ದರು. ಈ ಸಂದರ್ಭದಲ್ಲಿ  ಕಂಟೇನರ್ ಲಾರಿ  ಮಲಗಿದ್ದವರ ಮೇಲೆ ಹರಿದಿದೆ. ಮಾಲ (45)  ಎಂಬುವರು  ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ 13 ಜನ ಅದೃಷ್ಟವಶಾತ್ ಪಾರಾಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.