ಚಿಕ್ಕಮಗಳೂರು : ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು‌ ಶಾಸಕ ಸಿ.ಟಿ.ರವಿ‌ ಹರಕೆ…

268
firstsuddi

ಚಿಕ್ಕಮಗಳೂರು : ದತ್ತಜಯಂತಿಯ ಅಂಗವಾಗಿ ಭಿಕ್ಷಾಟನೆ ಮಾಡುವ ಮೂಲಕ ಪಡಿ ಸಂಗ್ರಹ ಮಾಡುತ್ತಿದ್ದ  ಶಾಸಕ ಸಿ.ಟಿ.ರವಿ‌ ಅವರು ನಗರದ ನಾರಾಯಣಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೋದಿ ಪ್ರಧಾನಿಯಾದರೆ ಭಾರತದ ಭವಿಷ್ಯ ಗಟ್ಟಿಯಾಗುತ್ತದೆ. ದೇಶಕ್ಕೆ ಸ್ವಾರ್ಥ ರಹಿತ ರಾಜಕಾರಣದ ಅಗತ್ಯವಿದೆ. ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 350 ಕ್ಕೂ ಹೆಚ್ಚು ಸ್ಥಾನಗಳಿಂದ ಗೆಲ್ಲಬೇಕು. ದೇಶದ ಪ್ರಗತಿಗೆ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದೇವೆ ಎಂದಿದ್ದಾರೆ.

ADVERTISEMENT