ಚಿತ್ರದುರ್ಗ: ವಿಷ ಆಹಾರ ಸೇವಿಸಿ ನಾಲ್ವರ ಸಾವು…

281
firstsuddi

ಚಿತ್ರದುರ್ಗ: ವಿಷ ಆಹಾರ  ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು,  ಮೂವರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಹುಲಿತೊಟ್ಟಿಲು ಗ್ರಾಮದಲ್ಲಿ ನಡೆದಿದೆ. ಶಶಿಧರ (50), ಚಿತ್ತಯ್ಯ (80), ಭಾಗ್ಯಮ್ಮ (35), ಹೇಮಲತಾ (30) ಮೃತ ದುರ್ದೈವಿಗಳು. ಮುದ್ದುರಾಜ್(14), ಹಾಗೂ ಅಜಯ್  (14), ಸದಾನಂದ(13),   ಮೂವರನ್ನು ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಐಮಂಗಲ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ.