ಚಿಕ್ಕಮಗಳೂರು: ಕರುವನ್ನು ದುಷ್ಕರ್ಮಿಗಳು ಕದ್ದಿದ್ದಕ್ಕೆ ತಾಯಿ ಹಸು ಕಾರನ್ನು ಅಟ್ಟಿಸಿಕೊಂಡು ಹೋದಂತಹ ಘಟನೆ ಕೊಪ್ಪ ಬಸ್ ಸ್ಟ್ಯಾಂಡ್ ಹಿಂಭಾಗ ನಡೆದಿದೆ. ಮಲೆನಾಡಿನಲ್ಲಿ ಗೋಕಳ್ಳತನ ಮುಂದುವರೆದಿದ್ದು, ಗೋ ಕಳ್ಳರು ಝೈಲೋ ಕಾರಿನಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಕರುವನ್ನು ಕದ್ದಿದ್ದಕ್ಕೆ ತಾಯಿ ಹಸು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹಸುವನ್ನ ಹಿಡಿಯಲಾಗದೆ ಗೋ ಕಳ್ಳರು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ತಾಯಿ ಹಸು ಕಾರನ್ನ ಅಟ್ಟಿಸಿಕೊಂಡು ಹೋಗಿರುವಂತಹ ದೃಶ್ಯಗಳು ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.









