ಉತ್ತರ ಕನ್ನಡ: ಭಾರತ ಬಂದ್ ಪ್ರತಿಭಟನೆ ವೇಳೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ. ಶಿಡ್ಲಗುಂಡಿ ಗ್ರಾಮದ ಶಾಂತಾ ಬಸವಣ್ಣೆಪ್ಪ ಚಕ್ರಸಾಲಿ (57 ) ಮೃತ ಮಹಿಳೆ. ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ನಲ್ಲಿ ಭಾಗವಹಿಸಿದ್ದ ಅವರು ಮುಂಡಗೋಡ ತಾಲೂಕು ಪಂಚಾಯತ್ ಎದುರು ಮೆರವಣಿಗೆ ವೇಳೆ ಏಕಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.










