ದಾವಣಗೆರೆ: ಕುಡುಕನೊಬ್ಬ ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ಹದಡಿ ರೋಡ್ ಬಳಿ ನಡೆದಿದ್ದು, ಇಂದು ಮಧ್ಯಾಹ್ನ ಪೊಲೀಸರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ರುದ್ರೇಶ್ ಎಂಬುವರ ಬೈಕನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಮದ್ಯ ಸೇವಿಸಿದ್ದ ರುದ್ರೇಶ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಎಎಸ್ಐ ಅಂಜಿನಪ್ಪ, ಪೇದೆ ಸಿದ್ದೇಶ್, ಹಾಗೂ ಮುಖ್ಯ ಪೇದೆ ನಾರಾಯಣ ರಾಜ್ ಅರಸು ಮೇಲೆ ಹಲ್ಲೆ ನಡೆಸಿದ್ದು, ಮುಖ್ಯ ಪೇದೆ ನಾರಾಯಣರಾಜ್ ಅರಸು ಅವರ ಹಣೆಗೆ ಪೆಟ್ಟು ಬಿದ್ದಿದ್ದು ,ಅವರಿಗೆ ಜಿಲ್ಲಾಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲ್ಲೆ ನಡೆಸಿದ ರುದ್ರೇಶ್ ನನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದು, ಬಡವಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










