ಚಾಮರಾಜನಗರ: ಹೆಂಡತಿ ಬೇಕು ಎಂದು ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿದ ಘಟನೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರದ ಬಳಿ ನಡೆದಿದೆ. ಮಹೇಶ್ ಎಂಬಾತ ಹೆಂಡತಿಯೊಂದಿಗೆ ದಿನನಿತ್ಯ ಗಲಾಟೆ ಮಾಡುತ್ತಿದ್ದು, ಆತನ ಹೆಂಡತಿ ಜಯಲಕ್ಷ್ಮಿ ಪಂಚಾಯತಿ ಸೇರಿಸಿ ಪತಿ ಪ್ರತಿದಿನ ಕುಡಿದು ಬಂದು ಹೊಡೆದು ಬಡಿದು ಗಲಾಟೆ ಮಾಡುತ್ತಿದ್ದಾನೆ ಎಂದು ಪತಿಯ ವಿರುದ್ಧ ಆರೋಪಿಸಿ ಪಂಚಾಯಿತಿ ಮೊರೆ ಹೋಗಿದ್ದರು. ಪಂಚಾಯಿತಿಯವರು ಇಬ್ಬರು ಬೇರೆ ಬೇರೆ ಇರುವಂತೆ ತೀರ್ಮಾನ ಮಾಡಿದ್ದರು. ಅದರಂತೆ ಕೆಲ ದಿನ ಬೇರೆ ಬೇರೆ ಇದ್ದರು ಆದರೆ ನಿನ್ನೆ ಮಹೇಶ್ ನನಗೆ ಹೆಂಡತಿ ಬೇಕು ಎಂದು ಟವರ್ ಏರಿ ಕುಳಿತಿದ್ದು, ಕಂಠಪೂರ್ತಿ ಕುಡಿದಿದ್ದ ಮಹೇಶ್ ಟವರ್ ನಿಂದ ಕೆಳಗೆ ಬೀಳುತ್ತಾನೋ ಎಂಬ ಆತಂಕ ಎಲ್ಲರಿಗಿತ್ತು. ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸರು ಹಾಗು ಅಗ್ನಿಶಾಮಕದಳದ ಸಿಬ್ದಂದಿ ಮಹೇಶ್ ನನ್ನು ಕೆಳಗಿಳಿಸಲು ಒಂದೂವರೆ ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಆತನ ಮನವೊಲಿಸಿ ಕೆಳಗಿಳಿಸಿದ್ದಾರೆ .










