ಮಹಾರಾಷ್ಟ್ರ: ಅರಣ್ಯದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದ ಸನ್ಯಾಸಿಯನ್ನು ಚಿರತೆಯೊಂದು ಹತ್ಯೆ ಮಾಡಿರುವ ಘಟನೆ ಚಂದ್ರಾಪುರ ಜಿಲ್ಲೆಯ ರಾಮ್‌ದೇಗಿ ಅರಣ್ಯದಲ್ಲಿ ನಡೆದಿದೆ. ಬೌದ್ಧ ಸನ್ಯಾಸಿ ರಾಹುಲ್ ವಾಕೆ (35) ಮೃತಪಟ್ಟ ಸನ್ಯಾಸಿ ಎಂದು ಗುರುತಿಸಲಾಗಿದ್ದು, ರಾಹುಲ್ ವಾಕೆ ಅವರ ಜೊತೆಯಲ್ಲಿ ಅವರ ಇಬ್ಬರು ಭಕ್ತರು ಅರಣ್ಯದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿ ರಾಹುಲ್ ವಾಕೆ ಅವರನ್ನು ಎಳೆದುಕೊಂಡು ಹೋಗಿದೆ. ತಕ್ಷಣ ಅವರ ಇಬ್ಬರು ಭಕ್ತರು ಓಡಿ ಹೋಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಅರಣ್ಯಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.










