ಚಿಕ್ಕಮಗಳೂರು : ಮತದಾರರ ಮನ ಸೆಳೆಯಲು ಒಂದೇ ದಿನದಲ್ಲಿ 5 ಕಿಲೋಮೀಟರ್ ಕಳಪೆ ರಸ್ತೆ ನಿರ್ಮಾಣ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಗಡಿಗೇಶ್ವರ ಗ್ರಾಮದಲ್ಲಿ ನಡೆದಿದೆ. ಕಳಪೆ ರಸ್ತೆ ನಿರ್ಮಾಣ ಮಾಡಿರುವ ಅಧಿಕಾರಿಗಳ ವಿರುದ್ಧ ಕಟ್ಟಿನಮನೆ-ಗಡಿಗೇಶ್ವರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ರೊಟ್ಟಿಯಂತೆ ಎದ್ದು ಬರುತ್ತಿದ್ದ ಡಾಂಬರನ್ನು ಕೈಯಲ್ಲಿ ಎತ್ತಿ ಬಿಸಾಡಿ ಪ್ರತಿಭಟನೆ ನಡೆಸಿದ್ದು, ಸುಮಾರು 1.75 ಕೋಟಿ ವೆಚ್ಚದ ನಿರ್ಮಾಣದ ರಸ್ತೆಯನ್ನು ತಳಕ್ಕೆ ಜಲ್ಲಿ ಹಾಕದೆ ಮಣ್ಣಿನ ಮೇಲೆ ಡಾಂಬರ್ ಹಾಕಿದ್ದ ರಸ್ತೆ ಕಂಟ್ರಾಕ್ಟರ್ ರೆಡ್ಡಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









