ಕಳಸ: ಕಡತವೊಂದಕ್ಕೆ ಸಹಿ ಹಾಕುವಂತೆ ಪೀಡಿಸಿ ಹಿರಿಯ ಅರಣ್ಯ ಅಧಿಕಾರಿಯಿಂದ ಅರಣ್ಯ ರಕ್ಷಕನಿಗೆ ಹಲ್ಲೆ…

554

ಕಳಸ: ಕಡತವೊಂದಕ್ಕೆ ಸಹಿ ಹಾಕುವಂತೆ ಪೀಡಿಸಿ ಹಿರಿಯ ಅರಣ್ಯ ಅಧಿಕಾರಿಯಿಂದ ಅರಣ್ಯ ರಕ್ಷಕನಿಗೆ ಹಲ್ಲೆ ಮಾಡಿದ ಘಟನೆ ಕಳಸ ಅರಣ್ಯ ಇಲಾಖೆಯಲ್ಲಿ ನಡೆದಿದೆ.
ಕಳಸ ಅರಣ್ಯ ಇಲಾಖೆ ಬಾಳೆಹೊಳೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಎಂ.ವೀರಭದ್ರ ಎಂಬುವವರು ಸರ್ಕಾರಿ ಜಮೀನು ಅಕ್ರಮ ಸಕ್ರಮ ಕುರಿತು 94ಸಿ ಪ್ರಕರಣದಡಿಯಲ್ಲಿ ಇಲಾಖೆಯ ಅಭಿಪ್ರಾಯಗಳ ಕುರಿತು ಪಂಚನಾಮೆ, ನಾಕಾಶೆಗಳನ್ನು ತಾವೇ ತಯಾರಿಸಿ,ಅವುಗಳನ್ನು ತೋರಿಸದೆ ದಾಖಲೆಗಳನ್ನು ಮುಚ್ಚಿಟ್ಟು ಅರಣ್ಯ ರಕ್ಷಕ ತೋಟದೂರ್ ಬೀಟ್ ಬಾಳೆಹೊಳೆ ಶಾಖೆಯ ಕೀರ್ತನ್ ಗೆ ಸಹಿ ಮಾಡಲು ಒತ್ತಾಯಿಸಿದ್ದಾರೆ.ಆದರೆ ಕಡತಗಳನ್ನು ನೋಡದೆ ಕಡತಕ್ಕೆ ಸಹಿ ಹಾಕಲು ಅರಣ್ಯ ರಕ್ಷಕ ಒಪ್ಪಲಿಲ್ಲ.ಆದರೆ ಸಹಿಹಾಕುವಂತೆ ಪೀಡಿಸಿ ಅವ್ಯಾಚ ಶಬ್ದಗಳಿಂದ ಬೈದು ಅರಣ್ಯ ರಕ್ಷಕನ ಮೇಲೆ ಹಲ್ಲೆಯನ್ನು ಮಾಡಲಾಗಿದೆ.
ಕಳಸ ಅರಣ್ಯ ಇಲಾಖೆಯ ಕಛೇರಿಯ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು ವೀರಭದ್ರ ಅರಣ್ಯ ರಕ್ಷಕ ಕಡತಗಳನ್ನು ಇಟ್ಟು ಕೀರ್ತನ್ ನನ್ನು ಸಹಿ ಹಾಕುವಂತೆ ಪೀಡಿಸಿ ಹಲ್ಲೆ ಮಾಡುತ್ತಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ.
ಈ ಬಗ್ಗೆ ಪ್ರಕರಣ ದಾಖಲಾಗಲಿಲ್ಲ ಆದರೆ ಇದು ಮೇಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಬಗ್ಗೆ ವರದಿ ನೀಡುವಂತೆ ಕಳಸ ಅರ್‍ಎಪ್‍ಒ ರವಿಕುಮಾರ್ ಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.