ರಾಜ್ಯ ಸಂಪದ್ಭರಿತವಾಗಿದೆ ಅದನ್ನು ಸಮರ್ಪಕ ವಾಗಿ ಉಳಿಸಿ ಬಳಸಬೇಕು: ಮುಖ್ಯಮಂತ್ರಿ ಕುಮಾರಸ್ವಾಮಿ…

437
firstsuddi

ಮೈಸೂರು: ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುಧಾಮೂರ್ತಿ ಅವರು ನಾನು ಕಂಡ ಅಪರೂಪದ ಮಹಿಳೆ,ಅಂತವರು ಚಾಮುಂಡೇಶ್ವರಿಗೆ ಪ್ರಥಮ ಪೂಜೆ ಸಲ್ಲಿಸಿದರೆ ಶ್ರೇಯಸ್ಸು ಸಿಗಲಿದೆ.ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಅಭಿವೃದ್ಧಿ ಬಗ್ಗೆ ಹಲವು ಕನಸು ಕಂಡಿದ್ದೇನೆ. ರಾಜ್ಯ ಸಂಪದ್ಭರಿತವಾಗಿದೆ ಅದನ್ನು ಸಮರ್ಪಕವಾಗಿ ಉಳಿಸಿ ಬಳಸಿ ನಾಡು ಕಟ್ಟಬೇಕು. ಅದಕ್ಕೆ ನಿಮ್ಮ ಸಹಕಾರ ಬೇಕು ಎಂದ ಅವರು ನಂತರ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ,ಆತ್ಮಹತ್ಯೆ ಮಾಡಿಕೊಂಡು ನಿಮ್ಮ ಕುಟುಂಬವನ್ನು ಅನಾಥ ಮಾಡಬೇಡಿ ಎಂದು ರೈತರಲ್ಲಿ ಕೇಳಿಕೊಂಡಿದ್ದಾರೆ.