ಕಾಂಗ್ರೆಸ್ ಪಕ್ಷದಿಂದ “ಹಂ ನಿಭಾಯೇಂಗೆ ” ಎಂಬ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ…

179
firstsuddi

ನವದೆಹಲಿ : ಲೋಕಸಭಾ ಚುನಾವಣೆ ಹಿನ್ನೆಲೆ, ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಂದ “ಹಂ ನಿಭಾಯೇಂಗೆ ” ಎಂಬ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಬಳಿಕ ಭಾಷಣ ಮಾಡಿದ ರಾಹುಲ್ ಗಾಂಧಿ ಅವರು ಒಂದು ವರ್ಷದಿಂದ ನಾವು ಈ ಪ್ರಣಾಳಿಕೆ ಬಿಡುಗಡೆ ಮಾಡಲು ಶ್ರಮಿಸುತ್ತಿದ್ದೇವೆ. ನಾವು ಈ ಪ್ರಣಾಳಿಕೆಯನ್ನು ಮುಚ್ಚಿದ ಕೊಠಡಿಯಲ್ಲಿ ಸಿದ್ದಪಡಿಸಿರುವುದಲ್ಲ. ಇದರಲ್ಲಿ ನಾವು 5 ಪ್ರಮುಖ ಭರವಸೆಗಳನ್ನು ಇಟ್ಟಿದ್ದೇವೆ.
*ಶೇಕಡಾ 20ರಷ್ಟು ಬಡವರ ಕುಟುಂಬಗಳ ಖಾತೆಗೆ ವರ್ಷಕ್ಕೆ 72000 ಹಣ ಹಾಕುವುದು.
* ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಭರ್ತಿ ಮಾಡುತ್ತಿರುವ ಶುಲ್ಕವನ್ನು ರದ್ದು ಪಡಿಸಿ ಉಚಿತವಾಗಿ ಪರೀಕ್ಷೆ ನಡೆಸುವುದು.
* ದೇಶದ ಎಲ್ಲ ರೈತರ ಸಾಲಮನ್ನಾ ಮಾಡುವ ಮೂಲಕ ‘ಕರ್ಜ್ ಮಾಫಿ’ ಯೋಜನೆಯನ್ನು ಜಾರಿಗೆ ತರುವುದು.
* ಆರೋಗ್ಯ ರಕ್ಷಣೆ ಕಾಯ್ದೆಯಡಿ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು.
* ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಮತ್ತು ಸೈನಿಕರ ಕುಟುಂಬಕ್ಕೆ ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ನೀಡುವುದು, ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು.
* ದೇಶದ ಪ್ರತಿ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಒಂದರಿಂದ ಹನ್ನೆರಡನೇ ವರ್ಗದವರಿಗೆ ಉಚಿತ ಶಿಕ್ಷಣ ನೀಡುವುದು ಹಾಗೂ 2023-24 ಜಿಡಿಪಿಯ ಶೇ.6ರಷ್ಟು ಹಣ ಶಿಕ್ಷಣಕ್ಕೆ ಮೀಸಲು.
* ರಾಷ್ಟ್ರದಲ್ಲಿ ಒಟ್ಟು 22 ಲಕ್ಷ ಉದ್ಯೋಗಗಳು ಖಾಲಿ ಇದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ 2020 ರ ವೇಳೆಗೆ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.