ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಬದಲಾವಣೆ ಇಲ್ಲ : ಮುಖ್ಯಮಂತ್ರಿ ಕುಮಾರಸ್ವಾಮಿ…

365
firstsuddi

ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು  ಜನಾರ್ದನ ರೆಡ್ಡಿಯವರ ಬಂಧನದಲ್ಲಿ  ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಜನಾರ್ದನ ರೆಡ್ಡಿಯವರ ಆಪ್ತರೊಬ್ಬರು ಹದಿನೆಂಟು ಕೋಟಿಯನ್ನು ತಿರುಪತಿ ಹುಂಡಿಗೆ ಹಾಕಿದ್ದೇವೆ ಎಂದಿದ್ದಾರೆ. ಇದು ಯಾವ ರೀತಿ ಅರ್ಥ ಬರುತ್ತದೆ ಎಂಬುದನ್ನು ಜವಾಬ್ದಾರಿ ಸ್ಥಾನದಲ್ಲಿರುವವರು ಯೋಚನೆ ಮಾಡಬೇಕು. ನಾನಾಗಲಿ ನಮ್ಮ ಸರ್ಕಾರದ ಮಂತ್ರಿಗಳಾಗಲಿ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ಇದೆ ವೇಳೆ ತಾವು ಟಿಪ್ಪು ಜಯಂತಿ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಬದಲಾವಣೆ ಇಲ್ಲ.  ರಾಜ್ಯ ಸರ್ಕಾರ ಆಚರಿಸುವ ಎಲ್ಲಾ ಜಯಂತಿಗಳಲ್ಲಿ ಮುಖ್ಯಮಂತ್ರಿಗಳೇ ಪಾಲ್ಗೊಳ್ಳಬೇಕೆಂಬ ನಿಯಮವಿಲ್ಲ. ವೈದ್ಯರ ಸಲಹೆ ಮೇರೆಗೆ ನಾನು ವಿಶ್ರಾಂತಿ ಪಡೆಯಲು ಹೋಗಿದ್ದ ಕಾರಣ ಟಿಪ್ಪು ಜಯಂತಿಗೆ ಹಾಜರಾಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.