ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್… ಪ್ರಯಾಣಿಕರು ಕಂಗಾಲು.

560

ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ನಿಂದ 5.ಕಿಮೀ‌ ವರೆಗೂ ಸಾಲು ಗಟ್ಟಿ ನಿಂತ ವಾಹನಗಳು.ಲಾರಿ ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಆಗಿದ್ದುಶಿರಾಡಿ ರಸ್ತೆ ಬಂದಾದ ಬಳಿಕ ಚಾರ್ಮಾಡಿ ರಸ್ತೆಯಲ್ಲಿ ಸಂಚರಿಸುತ್ತಿರುವ ಭಾರಿ ವಾಹನಗಳಿಂದ ಮತ್ತೆ ಮತ್ತೆ ಟ್ರಾಫಿಕ್ ಜಾಮ್ ಆಗುತ್ತಿದ್ದು.ಭಾರಿ ವಾಹನಗಳಿಗೆ ನಿಷೇಧವಿದ್ದರೂ ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆ ಹದಗೆಡುತ್ತಿರುವುದರ ಜೊತೆಗೆ ಇತರ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದ್ದು. ಮಂಗಳೂರು, ಧರ್ಮಸ್ಥಳಕ್ಕೆ ಸಂಚಾರ ಮಾಡುತ್ತಿರುವ ಸಾವಿರಾರು ಪ್ರಯಾಣಿಕರು ಟ್ರಾಫಿಕ್ ಜಾಮ್ ಹಾಗೂ  ದಟ್ಟ ಮಂಜು, ತುಂತುರು ಮಳೆಯಿಂದ ಪ್ರಯಾಣಿಕರು ಕಂಗಾಲು ಆಗಿದ್ದಾರೆ.