ಡಾಕ್ಯುಮೆಂಟ್ ನೀಡದ ಕಾರಣ ವ್ಯಕ್ತಿಯೊಬ್ಬನಿಗೆ ಲೇಡಿ ಪಿಎಸ್ಐ ನಿಂದ ಹಲ್ಲೆ.

369

ಚಿಕ್ಕಮಗಳೂರು : ಟ್ರಾಫಿಕ್ ಪಿಎಸೈಯೊಬ್ಬರು ಬೈಕ್ ಡಾಕ್ಯುಮೆಂಟ್ ನೀಡದ ಕಾರಣಕ್ಕೆ ಯುವಕನಿಗೆ ಥಳಿಸಿ, ದರ್ಪ ಮೆರೆದಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಟ್ರಾಫಿಕ್ ಪಿಎಸೈ ರಮ್ಯಾ ವ್ಯಕ್ತಿಯೊಬ್ಬನಿಗೆ ಪೊಲೀಸ್ ಜೀಪಿನಲ್ಲೇ ಹೊಡೆದಿದ್ದಾರೆ. ಚಿಕ್ಕಮಗಳೂರು ನಗರದ ಎಐಟಿ ವೃತದಲ್ಲಿ ಘಟನೆ ನಡೆದಿದೆ. ತಪಾಸಣೆ ವೇಳೆ ಡಾಕ್ಯುಮೆಂಟ್ ನೀಡದ ಕಾರಣ ಯುವಕನನ್ನ ಜೀಪಲ್ಲಿ ಥಳಿಸಿದ್ದಾರೆ. ರಸ್ತೆಯಲ್ಲಿ ಎಳೆದಾಡಿ ಆ ವ್ಯಕ್ತಿಯನ್ನು ಪೊಲೀಸ್ ಜೀಪ್ ನಲ್ಲೇ ಠಾಣೆಗೆ ಕರೆದುಕೊಂಡು ಹೋಗಿದ್ದಕ್ಕೆ ಹಾಗೂ ಯುವಕನಿಗೆ ಥಳಿಸಿದ್ದನ್ನ  ಸ್ಥಳೀಯರು ವಿರೋಧಿಸಿದ್ದಾರೆ.