ತುಮಕೂರು: ಪ್ರೀತಿಸುತ್ತಿದ್ದ ಅಪ್ರಾಪ್ತ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧುಗಿರಿ ತಾಲೂಕಿನ ಸುದ್ದೇ ಕುಂಟೆ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಸಂದೇಶ್(17) ಹಾಗೂ ಮೀನಾಕ್ಷಿ(17) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಮೃತ ಪ್ರೇಮಿಗಳು. ಕಳೆದ ಎರಡು ವರ್ಷಗಳಿಂದ ಸಂದೇಶ್ ಹಾಗೂ ಮೀನಾಕ್ಷಿ ಪರಸ್ಪರ ಪ್ರೀತಿಸುತ್ತಿದ್ದ ಇವರು ಕುಟುಂಬದವರಿಗೆ ಹೆದರಿ ಗ್ರಾಮದ ಹೊರವಲಯದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










